1.11 ಕೋಟಿ ರೂ. ವೆಚ್ಚದದಲ್ಲಿ ತಲೆ ಎತ್ತಲಿದೆ ರಾಜೀವ್ ಗಾಂಧಿ ಪ್ರತಿಮೆ

ಬೆಂಗಳೂರು: ನಗರದ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಬಳಿ ಅಂದಾಜು 1.11 ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಕಾಂಕ್ರೀಟ್ ಪ್ರತಿಮೆಗೆ ಬದಲಾಗಿ ಹೊಸ ಪ್ರತಿಮೆ ನಿರ್ಮಾಣವಾಗಲಿದೆ. ಸುಭಾಷ್ ನಗರ ಜಂಕ್ಷನ್ ಅಥವಾ ರಾಜೀವ್ ಗಾಂಧಿ ಚೌಕ್ ಎಂದು ಕರೆಯಲಾಗುವ, ಈ ಸ್ಥಳವು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ.

15ನೇ ಹಣಕಾಸು ಆಯೋಗದ ಕಾರ್ಯಕ್ರಮದಡಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೈಗೆತ್ತಿಕೊಂಡ 25 ಜಂಕ್ಷನ್‌ಗಳಲ್ಲಿ ಸುಭಾಷ್ ನಗರವೂ ಒಂದಾಗಿದ್ದರೆ, ಪ್ರತಿಮೆಯ ವೆಚ್ಚವನ್ನು ಬಿಬಿಎಂಪಿ ತನ್ನ ಸ್ವಂತ ಹಣವನ್ನು ಬಳಸಿ ಭರಿಸಲಿದೆ.

ಈ ಹಿಂದೆ ಜಂಕ್ಷನ್‌ನಲ್ಲಿ ಸ್ಥಾಪಿಸಲಾಗಿದ್ದ ಕಾಂಕ್ರೀಟ್ ಮೂರ್ತಿಯನ್ನು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಈಗ ಕಂಚಿನ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಕೆಲಸವನ್ನು ಪಾಲಿಕೆಯ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್‌ಗೆ ವಹಿಸಲಾಗಿದೆ – ಸಿಂಗಲ್ ಬಿಡ್ಡರ್ ಆಗಿದ್ದ ಕಲ್ಯಾಣ್ ಇನ್‌ಫ್ರಾ ಪ್ರಾಜೆಕ್ಟ್ಸ್‌ಗೆ ನೀಡಲಾಗಿದೆ.

 

Font Awesome Icons

Leave a Reply

Your email address will not be published. Required fields are marked *