10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ತುಮಕೂರು: ಖಾಸಗಿ ಬಸ್​ನಲ್ಲಿ ನಿಗೂಢ ಸ್ಪೋಟಗೊಂಡು 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್​ ಹೊಂದಿದ್ದ ಖಾಸಗಿ ಬಸ್​ನಲ್ಲಿ ಸಂಭವಿಸಿದೆ.

ಬಸ್ ತುಮಕೂರಿನಿಂದ ಕುಣಿಗಲ್​ ಕಡೆಗೆ ಹೋಗುತ್ತಿದ್ದಾಗ  ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ.

ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್​ ಬಾಟಲ್​ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್​ ದಿಢೀರ್​ ಸ್ಫೋಟಗೊಂಡಿದೆ.

ಆ್ಯಸಿಡ್​ ಬಾಟಲ್​​​ ಸ್ಫೋಟಗೊಂಡ ಸದ್ದಿಗೆ ಒಂದು ಕ್ಷಣ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಆ್ಯಸಿಡ್​ ಒತ್ತಡ ಹೆಚ್ಚಾಗಿ ಬಾಟಲ್​ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ರು ಪರಿಶೀಲನೆ ನಡೆಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *