10 ಮಂದಿ ಪೊಲೀಸರ ವಶಕ್ಕೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕೊಚ್ಚಿ: ವಲಸೆ ಕಾರ್ಮಿಕನೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ಮೂವಾಟ್ಟುಪುಳದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಅಶೋಕ್‌ ದಾಸ್‌ (24) ಎಂದು ಗುರುತಿಸಲಾಗಿದೆ.

ಉದ್ಯೋಗ ಅರಸಿ ಕೇರಳಕಕ್ಕೆ ಬಂದಿದ್ದ ಅಶೋಕ್‌, ಮೂವಾಟ್ಟುಪುಳ ಸಮೀಪದ ವಾಳಕಂ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದನು. ಎಫ್‌ಐಆರ್‌ ಪ್ರಕಾರ ಗುರುವಾರ ರಾತ್ರಿ ಅಶೋಕ್‌ ಅವರು, ಅದೇ ಪ್ರದೇಶದಲ್ಲಿದ್ದ ತಮ್ಮ ಸ್ನೇಹಿತೆಯರನ್ನು ಭೇಟಿಯಾಗಲು ತೆರಳಿದ್ದರು. ಆಗ ಸ್ಥಳೀಯರ ಗುಂಪೊಂದು ಅವರನ್ನು ಕಂಬಕ್ಕೆ ಕಟ್ಟಿಹಾಕಿ, ವಿಚಾರಣೆ ನಡೆಸಿ, ಬಳಿಕ ತೀವ್ರವಾಗಿ ಹಲ್ಲೆ ಮಾಡಿದೆ ಎಂದು ಮೂಲಗಳು ಹೇಳಿವೆ.

ಅಶೋಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಶುಕ್ರವಾರ ಮೃತಪಟ್ಟರು. ಅಶೋಕ್‌ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

Font Awesome Icons

Leave a Reply

Your email address will not be published. Required fields are marked *