1001 ಬಗೆಯ ಚೀಸ್ಗಳಿಂದ ಪಿಜ್ಜಾ ತಯಾರಿಸಿ ದಾಖಲೆ ಬರೆದ ಬಾಣಸಿಗರು

ಮುಂಬೈ: ಫಾಸ್ಟ್ ಫುಡ್ ಪ್ರಿಯರಿಗಂತೂ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಸಾಮಾನ್ಯವಾಗಿ ಒಂದು ಬಗೆಯ ಚೀಸ್ ಹಾಕಿ ʼಚೀಸ್ ಪಿಜ್ಜಾʼವನ್ನು ತಯಾರಿಸುತ್ತಾರೆ. ಆದ್ರೆ ಇಲ್ಲೊಂದು ಫ್ರೆಂಚ್ ಮೂಲದ ಬಾಣಸಿಗರು ಒಂದಲ್ಲ, ಹತ್ತಲ್ಲ, ನೂರಲ್ಲ ಬರೋಬ್ಬರಿ 1001 ಬಗೆಯ ಚೀಸ್ಗಳಿಂದ ಒಂದು ಪಿಜ್ಜಾವನ್ನು ತಯಾರಿಸಿ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಈ ವಿಶಿಷ್ಟ ಪಿಜ್ಜಾವನ್ನು ಫ್ರೆಂಚ್ ಮೂಲದ ಬಾಣಸಿಗರಾದ ಬೆನೈಟ್ ಬ್ರೂಯೆಲ್ ಮತ್ತು ಫ್ಯಾಬಿಯನ್ ಮೊಂಟೆಲಾನಿಕೊ ಎಂಬವರು ತಯಾರಿಸಿದ್ದಾರೆ. ಇವರ ಈ ವಿಶಿಷ್ಟ ಪ್ರಯತ್ನಕ್ಕೆ ಚೀಸ್ ಮೇಕರ್ ಸೋಫಿ ಹ್ಯಾಟ್ ರಿಚರ್ಡ್ ಲೂನಾ ಮತ್ತು ಯೂಟ್ಯೂಬರ್ ಫ್ಲೋರಿಯನ್ ಒನೈರ್ ಸಹಾಯ ಮಾಡಿದ್ದಾರೆ.

ಈ ಕುರಿತ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ನಾಲ್ಕು ಜನರ ತಂಡ ಸೇರಿ 1001 ಬಗೆಯ ಚೀಸ್ ಅನ್ನು ಬಳಸಿಕೊಂಡು ರುಚಿಕರ ಪಿಜ್ಜಾ ತಯಾರಿಸುವುದನ್ನು ಕಾಣಬಹುದು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧೀಕೃತ ವೆಬ್ಸೈಟ್ ಪ್ರಕಾರ ಈ ಪಿಜ್ಜಾಕ್ಕೆ ಬಳಸಲಾದ 940 ಚೀಸ್ಗಳು ಫ್ರೆಂಚ್ ದೇಶದ್ದಾದರೆ, ಉಳಿದ 61 ಬಗೆಯ ಚೀಸ್ಗಳು ಇತರ ದೇಶಗಳದ್ದಾಗಿದೆ. ಬೆನೈಟ್ ಬ್ರೂಯೆಲ್ ಅನುಭವಿ ಬಾಣಸಿಗರಾಗಿದ್ದು, ಅವರು ಈ ವಿಶೇಷ ದಾಖಲೆಯನ್ನು ನಿರ್ಮಿಸಲು ತೊಡಗಿರುವುದು ಇದೇ ಮೊದಲೇನಲ್ಲ, ಈ ಮೊದಲು 2020 ರಲ್ಲಿ ಅವರು 254 ವಿಧದ ಚೀಸ್ ಗಳಿಂದ ಪಿಜ್ಜಾವನ್ನು ತಯಾರಿಸಿ ದಾಖಲೆಯನ್ನು ಮಾಡಿದ್ದರು. ಇದೀಗ 1001 ಬಗೆಯ ಚೀಸ್ಗಳನ್ನು ಬಳಸಿ ಪಿಜ್ಜಾ ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ದಾಖಲೆ ನಿರ್ಮಿಸಿದ್ದಾರೆ.

https://www.instagram.com/guinnessworldrecords/?utm_source=ig_embed&ig_rid=d5315c30-9a01-4d20-9d18-42a85e42e30b

Font Awesome Icons

Leave a Reply

Your email address will not be published. Required fields are marked *