182 ಗ್ರಾಂ ಚಿನ್ನಾಭರಣ, 52 ಲಕ್ಷ ನಗದು ಕಳ್ಳತನ  – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಸಾಲ ಮಾಡಿಕೊಂಡಿದ್ದ ತಂಗಿ ಹಣಕ್ಕಾಗಿ ಸ್ವಂತ ಅಕ್ಕನ ಮನೆಯಿಂದಲೇ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉಮಾ ಬಂಧಿತ ಆರೋಪಿ.  ಬಂಧಿಯಾಗಿರುವ ಉಮಾಳಿಂದ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಚೌಡೇಶ್ವರಿ ದೇವರ ಹಬ್ಬ ಎಂದು ಉಮಾಳ ಅಕ್ಕ ಊರಿಗೆ ಹೋಗಿದ್ದರು. ಹೋಗುವ ಮುನ್ನ ಸಂಬಂಧಿಗೆ ಮನೆಯ ಕೀ‌ ಕೊಟ್ಟು ಹೋಗಿದ್ದರು.

ಕಳೆದ ಏ. 24ರ ರಾತ್ರಿ ಆಕೆಯ ಸಂಬಂಧಿ ಮನೆಗೆ ಮಲಗಲು ಹೋಗಿದ್ದಾಗ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಳು. ಉಮಾ 182 ಗ್ರಾಂ ಚಿನ್ನಾಭರಣ ಹಾಗು 52 ಲಕ್ಷ ನಗದು ಕಳ್ಳತನ ಮಾಡಿದ್ದಳು.

ಇನ್ನೂ ಮಂಡ್ಯ ಮೂಲದ ಆರೋಪಿ ಉಮಾ ಲಗ್ಗೆರೆಯಲ್ಲಿ ವಾಸವಾಗಿದ್ದಳು. ನಾಗವಾರದಲ್ಲಿ ಆಕೆಯ ಅಕ್ಕ ಹಾಗೂ ಬಾವ ವಾಸವಾಗಿದ್ದರು. ಉಮಾ ಸ್ತ್ರಿ ಶಕ್ತಿ ಸೇರಿದಂತೆ ಹಲವು ಕಡೆ ಸಾಲ ಮಾಡಿಕೊಂಡಿದ್ದಳು. ಇತ್ತೀಚೆಗೆ ಬಾವನ ಜತೆ ಕೂಡ ಹಣ ಕೇಳಿದ್ದಳು, ಆದರೆ ಅವರು ಕೊಟ್ಟಿರಲಿಲ್ಲ ಎನ್ನಲಾಗಿದೆ.

ಇದೇ ಕಾರಣಕ್ಕೆ ಅಕ್ಕ ಮನೆಯವರು ಊರಿಗೆ ಹೋದಾಗ, ನಕಲಿ ಕೀ ಬಳಸಿ ಚಿನ್ನ-ನಗದು ಎಗರಿಸಿದ್ದಳು. ಇತ್ತ ಕಳ್ಳತನ ಮಾಡಿದ ಬಳಿಕ ಖಾರದಪುಡಿ ಚೆಲ್ಲಿ ಸಾಕ್ಷಿ ನಾಶ ಮಾಡಿ ಕಾಲ್ಕಿತ್ತಿದ್ದಳು. ನಂತರ ಕಳ್ಳತನ ಕೇಸ್‌ನ ತನಿಖೆಗಿಳಿದ ಕೆಂಗೇರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *