2024ರ ‘ಲಾ‌ ಗೈಡ್’ ಕ್ಯಾಲೆಂಡರ್ ಡೈರಿ ಬಿಡುಗಡೆ ಹಾಗೂ ಪತ್ರಿಕೆಯ ಆನ್‌ ಲೈನ್ ಆವೃತ್ತಿ ಲೋಕಾರ್ಪಣೆ.. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಡಿಸೆಂಬರ್,2,2023(www.justkannada.in): ಹಿರಿಯ ವಕೀಲರಾದ  ಹೆಚ್ ಎನ್ ವೆಂಕಟೇಶ್ ಸಾರಥ್ಯದ ರಾಜ್ಯದ ಏಕೈಕ‌ ಕನ್ನಡ ಕಾನೂನು ಮಾಸಪತ್ರಿಕೆಯಾಗಿರುವ ಲಾ ಗೈಡ್  ಕನ್ನಡ ಕಾನೂನು ಮಾಸಪತ್ರಿಕೆಯ 2024ರ ಕ್ಯಾಲೆಂಡರ್, ಡೈರಿ ಬಿಡುಗಡೆ ಹಾಗೂ ಪತ್ರಿಕೆಯ ಆನ್‌ ಲೈನ್ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮ ಮೈಸೂರಿನ ಪ್ರತಿಷ್ಠಿತ ಹೋಟೆಲ್‌ ಗಳಲ್ಲಿ ಒಂದಾಗಿರುವ ಜೆ ಎಲ್ ಬಿ‌ ರಸ್ತೆಯಲ್ಲಿರುವ ಮೆಟ್ರೋಪೋಲ್‌ ಹೋಟೆಲ್‌ನಲ್ಲಿ ನಡೆಯಿತು.

ಬೆಳಗ್ಗೆ 10.30ಕ್ಕೆ ಆರಂಭವಾದ  ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ  ಸಿ ಜಿ ಹುನಗುಂದ ಅವರು ಲಾಗೈಡ್ ಕ್ಯಾಲೆಂಡರ್, ಡೈರಿ‌‌ ಬಿಡುಗಡೆ ಮಾಡಿದರು‌. ಲಾಗೈಡ್ ಪತ್ರಿಕೆಯ ಆನ್‌ಲೈನ್ ಆವೃತ್ತಿಯನ್ನು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸೀನಿಯರ್ ಡೈರೆಕ್ಟರ್  ಕೆ ವೆಂಕಟೇಶ ಮೂರ್ತಿ ಲೋಕರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ  ಜಿ ಟಿ ದೇವೇಗೌಡ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಭಾಗಿಯಾಗಿದ್ದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ  ಡಿ ಎನ್ ಮುನಿಕೃಷ್ಣ ಐಪಿಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದದಲ್ಲಿ ಸ್ಟಾರ್ ಆಫ್ ಮೈಸೂರ್ ಹಾಗೂ ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕರಾದ ಕೆ ಬಿ ಗಣಪತಿಯವನ್ನು ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು‌. ಉಳಿದಂತೆ ವಿಜ್ಞಾನಿಗಳಾದ ಶೈಲಜಾ ಧರ್ಮೇಶ್, ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್, ಹಿರಿಯ ವಕೀಲರುಗಳಾದ ಹೆಚ್ ವಿ ಶ್ರೀನಾಥ್, ಸಿ ಬಸವರಾಜು, ಮನೋಹರ್, ಪುಟ್ಟಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಹರೀಶ್ ಕುಮಾರ್ ಹೆಗ್ಡೆ, ಜಿ ವಿ ರಾಮಮೂರ್ತಿ, ಎಸ್ ಲೋಕೇಶ್, ಆರ್ ಗಿರಿಜೇಶ್, ಹೆಚ್ ವಿ ಬಸವರಾಜಪ್ಪ, ನಾಗರಾಜ್, ರಾಜೇಶ್, ಡಿವೈಎಸ್‌ಪಿಗಳಾದ ಕೆ ಎನ್ ಯಶವಂತ್, ಧರ್ಮೇಂದ್ರ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮದ ರೂವಾರಿಗಳಾದ ಲಾಗೈಡ್ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರಾದ ಹೆಚ್ ಎನ್ ವೆಂಕಟೇಶ್ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹಾಕಿ ಗೌರವಿಸಲಾಯಿತು.

ಲಾ ಗೈಡ್ ಹಿನ್ನೆಲೆ

ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ 23 ವರ್ಷದ ಹಿಂದೆ ಅಂದರೆ 2000ನೇ ಇಸವಿಯಲ್ಲಿ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಆರಂಭಿಸಿದ ಕಾನೂನು ಪತ್ರಿಕೆಯಾಗಿದೆ. ಕಾನೂನಿನ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಬೇಕು ಅದರಲ್ಲೂ ನಮ್ಮ ಮಾತೃಭಾಷೆ ಕನ್ನಡದಲ್ಲಿ ಅವರಿಗೆ ಮಾಹಿತಿ ಸಿಗಬೇಕು ಎನ್ನುವ ಕಾರಣಕ್ಕೆ ಎಚ್ ಎನ್ ವೆಂಕಟೇಶ್ ಈ ಪತ್ರಿಕೆಯನ್ನು ಆರಂಭಿಸಿದರು.  ಕಳೆದ 23 ವರ್ಷಗಳಿಂದಲೂ ಯಶಸ್ವಿಯಾಗಿ ಜನ ಸಾಮಾನ್ಯರಿಗೆ ಕಾನೂನಿನ ತಿಳುವಳಿಕೆ ಹಾಗೂ ಮಾಹಿತಿ ನೀಡುತ್ತಾ ಪತ್ರಿಕೆ 24ನೇ ವರ್ಷಕ್ಕೆ ಕಾಲಿಟ್ಟಿದೆ.

ಸಮಾಜಮುಖಿ ಕಾರ್ಯಗಳು – ತರಬೇತಿ ಕಾರ್ಯಾಗಾರಗಳು

ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ ವಕೀಲರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಗಿದೆ. ಅಷ್ಟೇ ಅಲ್ಲ ಲಾಗೈಡ್ ವತಿಯಿಂದ ಹಲವು ಕಾನೂನಿನ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ನೀಡಲಾಗುತ್ತಿದೆ.  ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಸರ್ಕಾರಿ ಅಭಿಯೋಜಕರ ( ಅಸಿಸ್ಟೆಂಟ್ ಪಿಪಿ ಹಾಗೂ ಪಿಪಿ ) ಪರೀಕ್ಷೆಗೆ ಸಿದ್ದವಾಗುವವರಿಗೆ ತಜ್ಞರಿಂದ ಉಚಿತ ತರಬೇತಿ ನೀಡಿಸಿ ಪಾಠ ಮಾಡಿಸಲಾಗುತ್ತಿದೆ. ನ್ಯಾಯಾಧೀಶರಾಗಿ ಆಯ್ಕೆಯಾಗಲು ಬೇಕಾದ ತರಬೇತಿಯನ್ನು ನೀಡಿದ ಹೆಗ್ಗಳಿಕೆ ಲಾ ಗೈಡ್ ಕನ್ನಡ ಕಾನೂನು ಬಳಗದ್ದಾಗಿದೆ. ಇದನ್ನು ಇದೇ ರೀತಿ ಮುಂದುವರಿಸಬೇಕು ಅನ್ನೋದು ಎಚ್ ಎನ್ ವೆಂಕಟೇಶ್ ಅವರ ಆಶಯವಾಗಿದೆ. ಕಾನೂನಿನ ಸಹಾಯ ಹಸ್ತ ಎಲ್ಲರಿಗೂ ಸಿಗಬೇಕೆನ್ನುವ ಎಚ್ ಎನ್ ವೆಂಕಟೇಶ್ ಅವರ  ಮಹತ್ತರವಾದ ಕನಸಿಗೆ ವಿವಿಧ ಕ್ಷೇತ್ರದ ಹಲವು ಸಮಾನ ಮನಸ್ಕರು ಜೊತೆಯಾಗಿದ್ದಾರೆ.

Key words: 2024 law guide –calendar- diary –release- online version – magazine

Font Awesome Icons

Leave a Reply

Your email address will not be published. Required fields are marked *