24 ಸಾವಿರ ಲೀಟರ್‌ ಮೇಲ್ಪಟ್ಟ ಟ್ಯಾಂಕರ್‌ ಗಳಿಗೆ ದರ ನಿಗದಿ

ಬೆಂಗಳೂರು: ನಗರದ ಕಡಿಯುವ ಸರಬರಾಜು ಮತ್ತು ಒಳಚಂರಂಡಿ ಮಂಡಳಿ ಇದೀಗ ಒಂದು ಆದೇಶವನ್ನು ಹೊರಡಿಸಿದ್ದು 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ.24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ 200 ವಾಟರ್ ಟ್ಯಾಂಕರ್​​ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಸಾರ್ವಜನಿಕರು ಈ ವಾಟರ್​ ಟ್ಯಾಂಕರ್​ಗಳನ್ನು ಉಪಯೋಗಿಸಕೊಳ್ಳವಂತೆ ಅನುವು ಮಾಡಿ ಕೊಟ್ಟಿದೆ.

24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳ ದರ
16 ಸಾವಿರ ಲೀಟರ್ ಟ್ಯಾಂಕರ್​ಗೆ 12,100 ರೂಪಾಯಿ
23 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್​ಗೆ 15400 ರೂಪಾಯಿ
30 ಸಾವಿರ ಲೀಟರ್ ಖಾಲಿ ಟ್ಯಾಂಕರ್​ಗೆ 17,900 ರೂಪಾಯಿ ನಿಗದಿ ಮಾಡಿದೆ.

600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳ ದರ
6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.
6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.
8 ಸಾವಿರ ಲೀಟರ್ ಟ್ಯಾಂಕರ್​ಗೆ 700 ರೂ. ದರ ನಿಗದಿ‌‌ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.
8 ಸಾವಿರ ಲೀಟರ್​ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.
5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್​​ಗೆ 1000 ರೂ. ದರ ನಿಗದಿ ಮಾಡಲಾಗಿದೆ.
1200 ಲೀಟರ್ ಟ್ಯಾಂಕರ್​​​ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.

ಜಲಮಂಡಳಿ ಈ ಹಿಂದೆ 600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳಿಗೂ ಮಾತ್ರ ದರ ನಿಗದಿ ಮಾಡಿತ್ತು. ಇದೀಗ 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ. ಜಿಎಸ್​​ಟಿ ಸೇರಿಸಿ ಈ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *