3 ಲಕ್ಷಕ್ಕೂ ಹೆಚ್ಚು ನಗದು ಹರಿದು ತಿಂದ ಸಾಕು ನಾಯಿ: ವಿಡಿಯೋ ವೈರಲ್

ಪೆನ್ಸಿಲ್ವೇನಿಯಾದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಮನೆಯಲ್ಲಿಟ್ಟಿದ್ದ $4,000 (3,32,640.80 ರೂಪಾಯಿ) ನಾಪತ್ತೆಯಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರ ಸಾಕು ನಾಯಿ ನೋಟುಗಳನ್ನು ಜಗಿಯುತ್ತಿರುವುದು ಕಂಡು ಬಂದಿದೆ. ಮುದ್ದಿನಿಂದ ಸಾಕಿದ ನಾಯಿಯನ್ನು ಹೊಡೆಯಲಾಗದೆ ಮಾಲೀಕರು ದಿಕ್ಕು ತೋಚದ ಸ್ಥಿತಿಯಲ್ಲಿ ಕುಳಿತ್ತಿದ್ದಾರೆ.

‌ಹೌದು. . ಸಾಕಷ್ಟು ನೋಟುಗಳನ್ನು ಜಗಿದು ತಿಂದಿದ್ದು, ಉಳಿದದ್ದನ್ನು ಚೂರು ಚೂರಾಗಿ ಹರಿದು ಹಾಕಿದೆ. ನಾಯಿ ಕರೆನ್ಸಿ ನೋಟುಗಳನ್ನು ತಿಂದು ಉಳಿದ ನೋಟುಗಳನ್ನು ಹರಿದು ಹಾಕಿರುವುದನ್ನು ಅರಿತ ದಂಪತಿ ಕೂಡಲೇ ತಮ್ಮ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ದಿದ್ದಾರೆ. ಬಳಿಕ ಬ್ಯಾಂಕ್​​​ಗೆ ತೆರಳಿದ ದಂಪತಿಗಳು ಘಟನೆಯನ್ನು ವಿವರಿಸಿದ್ದಾರೆ.

ನೋಟುಗಳ ಕ್ರಮಸಂಖ್ಯೆ ಸಿಕ್ಕರೆ ಬ್ಯಾಂಕ್ ಗೆ ಜಮಾ ಮಾಡಬಹುದು ಬ್ಯಾಂಕ್​​ ಸಿಬ್ಬಂದಿ ತಿಳಿಸಿದ್ದಾರೆ. ದಂಪತಿಗಳು ಹರಿದ ನೋಟುಗಳನ್ನು ಹುಡುಕತೊಡಗಿದ್ದು,ಇದಕ್ಕಾಗಿ ನಾಯಿಯ ಮಲ ಮತ್ತು ವಾಂತಿ ಎತ್ತಿಕೊಂಡು ಅದರಲ್ಲಿ ನೋಟುಗಳನ್ನು ಹುಡುಕತೊಡಗಿದ್ದಾರೆ.

ಬಳಿಕ ಆ ನೋಟುಗಳನ್ನು ಸ್ವಚ್ಛಗೊಳಿಸಿ ನೋಟುಗಳನ್ನು ಜೋಡಿಸಿದ್ದಾರೆ. ಹರಸಾಹಸದ ನಂತರ ದಂಪತಿಗೆ 3,550 ಡಾಲರ್ (2 ಲಕ್ಷದ 95 ಸಾವಿರದ 137 ರೂ.) ಮೌಲ್ಯದ ನೋಟುಗಳು ಸಿಕ್ಕಿವೆ. ಈ ವಿಡಿಯೋವನ್ನು ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ನಾಯಿಯ ಮಲದಲ್ಲಿ ನೋಟುಗಳನ್ನು ಹುಡುಕುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

https://www.instagram.com/reel/C01rnKxr4pp/?utm_source=ig_web_copy_link

 

Font Awesome Icons

Leave a Reply

Your email address will not be published. Required fields are marked *