33 ವರ್ಷಕ್ಕೆ ಉಸಿರು ಚೆಲ್ಲಿದ ಜನಪ್ರಿಯ ಮಾಡೆಲ್

ಕೇವಲ 33 ವರ್ಷಕ್ಕೆ ಕಾರ್ಡಿಯಕ್ ಅರೆಷ್ಟ್ ಆಗಿ ಜನಪ್ರಿಯ ಮಾಡೆಲ್ ವಿಧಿವಶರಾಗಿದ್ದಾರೆ. ಬ್ರೆಜಿಲ್​ನಲ್ಲಿ ಫಿಟ್ನೆಸ್, ಫ್ಯಾಷನ್​ನಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಮಾಡೆಲ್​ ಲಾರಿಸ್ಸಾ ಬೋರ್ಗೆಸ್ ಅವರಿಗೆ 2 ಬಾರಿ ಕಾರ್ಡಿಯಾಕ್ ​ ಅರೆಸ್ಟ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ.

ಲಾರಿಸ್ಸಾ ಬೋರ್ಗೆಸ್ (33) ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರೇ ಇನ್​ಸ್ಟಾದಲ್ಲಿ ಪೋಸ್ಟ್​ ಹಾಕಿ ಸಂತಾಪ ಸೂಚಿಸಿದ್ದಾರೆ. ಇನ್ನೂ ಯಂಗ್​ ಆಗಿದ್ದ ಲಾರಿಸ್ಸಾ ಬಹು ಬೇಗನೇ ನಿಧನ ಹೊಂದಿರುವುದು ನಮಗೆ ಸಾಕಷ್ಟು ನೋವು ತಂದಿದ್ದು ನಮ್ಮ ಹೃದಯ ಛಿದ್ರವಾದಂತೆ ಆಗಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ. ​ ​

ಗ್ರಾಮಡೋ ಎನ್ನುವ ಪ್ರದೆಶದಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ಕೋಮಾಗೆ ಹೋಗಿದ್ದರು. ಇದರಿಂದ ಆ.20 ರಿಂದ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಅವರು ಪಡೆಯುತ್ತಿದ್ದರು. ಒಮ್ಮೆ ಕಾರ್ಡಿಕ್ ಅರೆಸ್ಟ್ ಆದ ಬೆನ್ನಲ್ಲೇ ಮತ್ತೊಮ್ಮೆ ಕಾರ್ಡಿಕ್ ಅರೆಸ್ಟ್ ಆಗಿದೆ. ಹೀಗಾಗಿ ಲಾರಿಸ್ಸಾ ಬೋರ್ಗೆಸ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Font Awesome Icons

Leave a Reply

Your email address will not be published. Required fields are marked *