ಬೆಂಗಳೂರು: ಬಸವೇಶ್ವರನಗರದಲ್ಲಿ ನಡೆದ ಯುವಕ ಯೋಗೇಶ್ ಕೊಲೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್ ಮಗ ಯೋಗೇಶ್ನನ್ನು ಕೊಲೆ ಮಾಡಿದ್ದಾನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪುತ್ರ ಯೋಗೇಶ್ನನ್ನು ಹತ್ಯೆಗೈದು ಆತ್ಮಹತ್ಯೆ ಅಂತ ತಂದೆ ಪ್ರಕಾಶ್ ಬಿಂಬಿಸಿದ್ದನು. ಮಗನ ಕುಡಿತದ ಚಟದಿಂದ ಬೇಸತ್ತು ಈ ಕೃತ್ಯ ವ್ಯಸಗಿದ್ದಾನೆ. ಯೋಗೇಶ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದನು. ಕುಡಿತದ ಚಟ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆ ನಡೆದು ಮಗನ ಕೊಲೆಯಲ್ಲಿ ಅಗತ್ಯವಾಗಿದೆ.
ಬುಧವಾರ (ಮಾ.06) ರಂದು ತಂದೆ-ಮಗನ ನಡುವೆ ಗಲಾಟೆನಡೆದು ತಂದೆ ಮಗನನ್ನು ಕೊಲೆ ಮಾಡಿದ್ದಾನೆ.
ಈ ಪ್ರಕರಣದ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದಾಗ ವಿಚಾರಣೆಗೆ ಮುಂದಾದ ಪೋಲಿಸ್ ಆರೋಪಿ ತಂದೆಯ ಬಂಡವಾಳ ಬರಲಾಗಿದೆ. ಬಸವೇಶ್ವರ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.