#BoycottMaldives: ಹೋಟೆಲ್ ಬುಕಿಂಗ್, ಫ್ಲೈಟ್ ರದ್ದು, ಕಂಗಾಲಾದ ಪ್ರವಾಸೋದ್ಯಮ

ದೆಹಲಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಮಾಡಿದ ಫೋಟೋಶೂಟ್ ಬಗ್ಗೆ ಮಾಲ್ಡೀವ್ಸ್​ನ ಸಚಿವರು ಲೇವಡಿ ಮಾಡಿದ ಬಳಿಕ ಭಾರತೀಯರಿಂದ ಬಾಯ್ಕಾಟ್ ಟ್ರೆಂಡ್ ನಡೆದಿದೆ. ಮಾಲ್ಡೀವ್ಸ್​ಗೆ ಭಾರತೀಯರು 8,000 ಹೋಟೆಲ್ ಬುಕಿಂಗ್ಸ್ ಮತ್ತು 2,500 ಫ್ಲೈಟ್ ಟಿಕೆಟ್ ಬುಕಿಂಗ್​ಗಳನ್ನು ರದ್ದು ಮಾಡಿದ್ದಾರೆ. ಪ್ರವಾಸೋದ್ಯಮವು ಮಾಲ್ಡೀವ್ಸ್​ನ ಪ್ರಮುಖ ಆದಾಯವಾಗಿದೆ. ಅಲ್ಲಿನ ಸರ್ಕಾರದ ಶೇ. 40ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ.

ಇನ್ನು ಈ ಬಾಯ್ಕಾಟ್ ಟ್ರೆಂಡ್ ಆರಂಭವಾಗುತ್ತಿದ್ದಂತೆಯೇ ಮಾಲ್ಡೀವ್ಸ್ ಸರ್ಕಾರ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿದೇಶೀ ನಾಯಕರ ಮೇಲೆ ವ್ಯಕ್ತವಾಗುವ ಅಭಿಪ್ರಾಯಗಳು ಅವರ ವೈಯಕ್ತಿಕವಾದುದಾಗಿರುತ್ತವೆ. ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯ ಆಗಿರುವುದಿಲ್ಲ. ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದಿಲ್ಲ, ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಸ್ನಾರ್​ಕೆಲಿಂಗ್ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿದ್ದರು. ಒಂದಷ್ಟು ಫೋಟೋಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಾಲ್ಡೀವ್ಸ್​ನ ಕೆಲ ಸಚಿವರು ಸೇರಿದಂತೆ ಬಹಳ ಮಂದಿ ನರೇಂದ್ರ ಮೋದಿಯ ಲಕ್ಷದ್ವೀಪ ಭೇಟಿ ಬಗ್ಗೆ ಅವಹೇಳನ ಮಾಡಿದ್ದಾರೆ.

ಇದು ಇಂದು ಮಾಲ್ಡೀವ್ಸ್ ಗೆ ಮಹತ್ತರವಾದ ಹೊಡೆತವನ್ನು ನೀಡಿದೆ. ಇತ್ತ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೈಜೋಡಿಸಿದ್ದಾರೆ. ಭಾರತದ ಸುಂದರ ತಾಣಗಳನ್ನು ನೋಡಿ ಆನಂದಿಸಿ ಎಂದಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್ ಸಚಿವರ ಹೇಳಿಕೆ ವಿರುದ್ಧ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಭಾರತದ ಪ್ರವಾಸಿ ತಾಣ ಹಾಗೂ ಆತಿಥ್ಯದ ಕುರಿತ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮಾಲ್ಡೀವ್ಸ್‌ಗೆ ತಕ್ಕ ತಿರುಗೇಟು ನೀಡಿದ್ದಾರೆ. ಭಾರತದ ಅತೀ ದೊದ್ದ ಕರಾವಳಿ ತೀರ್ ಪ್ರದೇಶವಿದೆ. ಜೊತೆಗೆ ಐಲ್ಯಾಂಡ್ ಸೌಂದರ್ಯವೂ ಇದೆ. ಅತಿಥಿ ದೇವೋ ಭವ ನಮ್ಮ ಮೂಲಮಂತ್ರವಾಗಿದೆ . ನಾವು ನಮ್ಮ ಸುಂದರ ತಾಣಗಳತ್ತ ಸವಿ ಅನುಭವಿಸೋಣ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಮಾಲ್ಟೀವ್ಸ್ ಸಚಿವರು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ. ಮಾಲ್ಡೀವ್ಸ್‌ಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭಾರತದಿಂದಲೇ ತೆರಳುತ್ತಾರೆ. ಆದರೂ ಭಾರತದ ವಿರುದ್ಧ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ನೆರೆಯ ರಾಷ್ಟ್ರಗಳ ಜೊತೆ ನಾವು ಉತ್ತಮ ಸಂಬಂಧ ಬಯಸಿದ್ದೇವೆ. ಆದರೆ ಇಂತಹ ಹೇಳಿಕೆಯನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ. ನಾನು ಹಲವು ಬಾರಿ ಮಾಲ್ಡೀವ್ಸ್ ಭೇಟಿ ನೀಡಿದ್ದೇನೆ. ಎಲ್ಲವನ್ನೂ ಹೊಗಳಿದ್ದೇನೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುವುದು ಸಹಿಸಲು ಸಾಧ್ಯವಿಲ್ಲ. ನಾವೀಗ ನಮ್ಮಲ್ಲೇ ಇರುವ ಸುಂದರಣ ತಾಣಗಳಿಗೆ ಭೇಟಿ ನೀಡೋಣ, ನಮ್ಮ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋಣ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *