ಬೆಂಗಳೂರು: ಎಂ.ಆನಂದರಾಜ್ ನಿರ್ದೇಶನದ “Chef ಚಿದಂಬರ” ಚಿತ್ರದ ಮೂಲಕ ನಟ ಅನಿರುದ್ಧ ಜಟ್ಕರ್ ಬೆಳ್ಳಿ ಪರದೆಗೆ ಮರಳುತ್ತಿದ್ದಾರೆ.
ಐದು ವರ್ಷಗಳ ಅಂತರದ ನಂತರ ಅನಿರುದ್ಧ ಜಟ್ಕರ್ ಮರಳುತ್ತಿದ್ದಾರೆ. ನಟಿ ನಿಧಿ ಸುಬ್ಬಯ್ಯ ಅವರಿಗೂ ಇದು ಪುನರಾಗಮನದ ಚಿತ್ರವಾಗಲಿದೆ.
ಈ ಚಿತ್ರದ ಚಿತ್ರೀಕರಣ ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ನಟ ಕಿಚ್ಚ ಸುದೀಪ್ ಚಿತ್ರದ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿದರು.
ಅನಿರುದ್ಧ ಜಟ್ಕರ್ ಈ ಚಿತ್ರದಲ್ಲಿ ಬಾಣಸಿಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ಆರ್ಯನಾಗಿ ಅನಿರುದ್ಧ ಟಿವಿ ಲೋಕದ ಮನೆಮಾತಾದರು. ಈ ಹಿಂದೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದ ಅನಿರುದ್ಧ ಅವರು ಐದು ವರ್ಷಗಳ ನಂತರ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗುತ್ತಿದ್ದಾರೆ.
ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ.