ಫೆ.29ಕ್ಕೆ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ

ಚಿಕ್ಕಮಗಳೂರು: ತಾಲೂಕಿನ ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಫೆ.೨೯ ರಂದು ಡಾ. ಪುನೀತ್‌ರಾಜ್‌ಕುಮಾರ್ ಅವರ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದು ಎಂದು ಕಸಾಪ ಹೋಬಳಿ ಅಧ್ಯಕ್ಷ ವಾಸುಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಳಚಂದ್ರ ಗ್ರೂಪ್ ಆಫ್ ಎಸ್ಟೇಟ್ ಗರಿಗೆಖಾನ್, ಪುನೀತ್‌ರಾಜ್‌ಕುಮಾ ರ್ ಅಭಿಮಾನಿ ಬಳಗ, ಗಾಳಿಗುಡ್ಡೆ ಗ್ರಾಮಸ್ಥರು ಮತ್ತು ದಾನಿಗಳ ನೆರವಿ ನಿಂದ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ದ್ದು, ಅಂದು ಸಂಜೆ ೪ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾ ರ್ಜ್ ಪ್ರತಿಮೆ ಅನಾವರಣ ಮಾಡಲಿ ದ್ದಾರೆ ಎಂದರು. ಗಾಳಿಗುಡ್ಡೆ ಗ್ರಾಮದ ಸರಕಾರಿ ಪಾಠಶಾಲಾ ಅವರಣದ ಭಗತ್‌ಸಿಂಗ್ ಬಯಲು ರಂಗಮಂದಿರದಲ್ಲಿ ಸಮಾ ರಂಭ ಏರ್ಪಡಿಸಿದ್ದು ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮ ಯ್ಯ, ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕ ಸಿ.ಟಿ ರವಿ, ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ತಾಲೂ ಕು ಅಧ್ಯಕ್ಷ ಸೋಮಶೇಖರ್, ಎಸ್. ಎಸ್.ವೆಂಕಟೇಶ್, ಜಿ.ಬಿ. ಪವನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಿ ಯಶಸ್ವಿಗೊಳಿಸಲು ವಿನಂತಿಸಿದರು. ಹೋಬಳಿ ಕಸಪಾ ನಿಕಟ ಪೂರ್ವ ಅಧ್ಯಕ್ಷ ಕೆ.ವಿ .ರವಿಕುಮಾರ್, ಇದ್ದರು.

Font Awesome Icons

Leave a Reply

Your email address will not be published. Required fields are marked *