ಕೇವಲ 150 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಅಸ್ಸಾಂ:  ಕೇಂದ್ರ ಸರ್ಕಾರದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯು ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಕ್ಟೋಬರ್ 21, 2016 ರಂದು ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾರಂಭಿಸಿರುವ ಉಡಾನ್ ಯೋಜನೆಯು ಸಬ್ಸಿಡಿ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ವಿಮಾನಯಾನ ಒದಗಿಸುವ ಗುರಿಯನ್ನು ಹೊಂದಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮತ್ತು ಪ್ರಯಾಣಿಕರಿಗೆ ಸುಲಭವಾದ ಸಾರಿಗೆಯನ್ನು ಒದಗಿಸುವ ಮೂಲಕ ವಿವಿಧ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಇದು ಸಹಕಾರಿಯಾಗಲಿದೆ ಎನ್ನಲಾಗಿದೆ.

ಅಸ್ಸಾಂನ ಲೀಲಾಬಾರಿ ಮತ್ತು ತೇಜ್‌ಪುರ ನಡುವಿನ ಮಾರ್ಗದಲ್ಲಿ ಅಲಯನ್ಸ್ ಏರ್ ಕಂಪನಿಯು ಕೇವಲ 150 ರೂ. ಕ್ಕೆ ಪ್ರಯಾಣದ ಆಫರ್ ನೀಡುತ್ತಿದ್ದು, 50 ನಿಮಿಷಗಳ 147 ಕಿ.ಮೀ ಪ್ರಯಾಣವನ್ನು ಕೇವಲ 150 ರೂ. ಗಳಲ್ಲಿ ಪೂರೈಸಬಹುದಾಗಿದೆ. ಜೊತೆಗೆ ದೇಶದ ಪ್ರಮುಖ 22 ಮಾರ್ಗಗಳಲ್ಲಿ ರೂ. 1 ಸಾವಿರಕ್ಕಿಂತಲೂ ಕಡಿಮೆ ಮೂಲ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಇವು ದೇಶದೊಳಗೆ ವಿವಿಧ ಸ್ಥಳಗಳನ್ನು ಅನ್ವೇಷಿಸಲು ಬಯಸುವ ಪ್ರಯಾಣಿಕರಿಗೆ ವಿಮಾನ ಪ್ರಯಾಣವನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸಲಿವೆ ಎನ್ನಬಹುದು.

Font Awesome Icons

Leave a Reply

Your email address will not be published. Required fields are marked *