ಸಾವಿನ ಸುತ್ತ ಹಲವು ಅನುಮಾನ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ನವದೆಹಲಿ:  ಪಿಜಿಯ 2ನೇ ಮಹಡಿಯಿಂದ ಜಂಪ್ ಮಾಡಿ ಮಹಿಳಾ ಯೂಟ್ಯೂಬರ್​ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಮುಖರ್ಜಿನಗರದಲ್ಲಿ ನಡೆದಿದೆ.

ಯೂಟ್ಯೂಬರ್ ಸ್ವಾತಿ ಗೋದಾರ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಈಕೆ ಮೂಲತಹ ಉತ್ತರಪ್ರದೇಶದ ಮೀರತ್​ ಮೂಲದವರಾಗಿದ್ದು ಕಳೆದ 10 ವರ್ಷದಿಂದ ದೆಹಲಿಯಲ್ಲಿ ವಾಸವಿದ್ದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಆತ್ಮಹತ್ಯೆ ಯಾಕೆ ಮಾಡಿಕೊಂಡಳು ಎಂಬುದಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಪ್ರತ್ಯಕ್ಷದರ್ಶಿಗಳು ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸ್ವಾತಿ 4 ತಿಂಗಳ ಹಿಂದೆ ಪಿಜಿಯಿಂದ ಹೊರ ಬಂದು ರೂಮ್ ಮಾಡಿದ್ದಳು. ಓದು ಎಲ್ಲ ಮುಗಿಸಿದ್ದೇನೆ. ಈಗ ಪೂರ್ಣ ಅವಧಿಯ ಯೂ ಟ್ಯೂಬರ್ ಆಗಿದ್ದೇನೆ ಎಂದು ಮನೆಯ ಮಾಲೀಕರಿಗೆ ಹೇಳಿದ್ದಳು. UPSC ಮತ್ತು SSC ಪರೀಕ್ಷೆಯಲ್ಲಿ ಪಾಸ್ ಆಗದ ಕಾರಣ ಎಕ್ಸಾಂ ಮೇಲೆ ಹೋಪ್ ಕಳೆದುಕೊಂಡಿದ್ದರಿಂದ ಯೂಟ್ಯೂಬ್ ಪ್ರಾರಂಭಿಸಿದ್ದಳು.

ಆದರೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821

Font Awesome Icons

Leave a Reply

Your email address will not be published. Required fields are marked *