ಖತರ್ನಾಕ್ ಖದೀಮರು ಹಿಂಗೂ ಯಾಮಾರಿಸ್ತಾರೆ​..! – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಯುವಕ ಯುವತಿಯರೇ ಎಚ್ಚರ. ನಿಮ್ಮ ತಂದೆ ಅಥವಾ ತಾಯಿ ಪರಿಚಯ ಅಂತ ಮಾತಾಡಿಸಿಕೊಂಡು ಬಂದ್ರೆ ಹುಷಾರಾಗಿರಿ. ನೀವೆನಾದ್ರು ಇಲ್ಲಿ ಎಡವಿದ್ರೆ ನಾಮ ಗ್ಯಾರಂಟಿ. ಹೌದು. . ಎಮೋಷನಲ್​​ ಬ್ಲಾಕ್​ಮೇಲಿಂಗ್​ ಸೈಬರ್​​ ಕ್ರೈಮ್​ ಒಂದು ಹುಟ್ಟಿಕೊಂಡಿದೆ.

ಅದಿತಿ ಚೋಪ್ರಾ ಎಂಬ ಮಹಿಳಾ ಉದ್ಯಮಿಗೆ ಖದೀಮರು ಕಾಲ್​ ಮಾಡಿ ಗಾಳ ಹಾಕಿದ್ದರು. ಆದ್ರೆ ಅದಿತಿ ಫ್ರಾಡ್​ಗಳ ಫೇಕ್​ ಕಾಲ್​ನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹೀಗೂ ಮೋಸ ಮಾಡ್ತಾರೆ ಹುಷಾರಾಗಿರಿ ಅಂತ ಸ್ವತಃ ಅದಿತಿ ಚೋಪ್ರಾ ಈ ಬಗ್ಗೆ ಎಕ್ಸ್​ನಲ್ಲಿ ಮೆಸೇಜ್​ ಹಾಕಿ ಅಲರ್ಟ್​​ ಆಗಿರುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ಅದಿತಿ ಚೋಪ್ರಾಗೆ ಅನೌನ್ ನಂಬರ್​ನಿಂದ​​ ಕಾಲ್ ಬಂದಿತ್ತು. ಕಾಲ್​ನಲ್ಲಿ ​​ಮಗಳೇ ಅಂತ ಖದೀಮ ಆತ್ಮೀಯವಾಗಿ ಮಾತನಾಡಿದ್ದ. ಬಳಿಕ ನಿಮ್ಮ ತಂದೆಗೆ ಹಣ ಕಳಿಸಬೇಕಿತ್ತು ಅಂತ ಯುವತಿಗೆ ಹಣ ಹಾಕಿರೋದಾಗಿ ಫೇಕ್​ ಮೆಸೇಜ್​ ಮಾಡಿದ್ದ. ಇದಾದ ಮೇಲೆ ಅಯ್ಯೋ 3 ಸಾವಿರ ಬದಲಿಗೆ 30 ಸಾವಿರ ಹಾಕಿದ್ದಾಗಿ ಹೇಳಿದ್ದ ವಂಚಕ. ಮಿಸ್​ ಆಗಿ ಬಂತು ನನ್ನ UPIಗೆ ಹಣ ವಾಪಸ್​​ ಕಳಿಸುವಂತೆ ಒತ್ತಾಯ ಮಾಡಿದ್ದ. ಡಾಕ್ಟರ್ ಬಳಿ ತಪಾಸಣೆಗೆ ಬಂದಿರೋದಾಗಿ ಪದೇ ಪದೆ ಕಾಲ್​ ಮಾಡಿ ಒತ್ತಡ ಹಾಕಿದ್ದನಂತೆ.

ಅನುಮಾನ​ ಬಂದು ಅದಿತಿ ಚೋಪ್ರಾ ಬ್ಯಾಂಕ್​ ಅಕೌಂಟ್​ ಚೆಕ್​ ಮಾಡಿದಾಗ ಅಸಲಿಗೆ ಯಾವುದೇ ಹಣ​​ ಬಂದಿರೋದಿಲ್ಲ. ಬಳಿಕ ತನಗೆ ಕಾಲ್​ ಬಂದಿದ್ದ ನಂಬರ್​ಗೆ ಮತ್ತೆ ಕಾಲ್​ ಮಾಡಿದ್ರೆ ಆ ನಂಬರ್​ ಸ್ವಿಚ್​ ಆಫ್​ ಆಗಿತ್ತಂತೆ. ಈ ಬಗ್ಗೆ ವಂಚನೆಗೊಳಗಾದ ಯುವತಿಯೇ ಸೋಶಿಯಲ್​ ಮೀಡಿಯಾದಲ್ಲಿ ತನಗಾದ ಾನುಭವದ​ ಬಗ್ಗೆ ಪೋಸ್ಟ್​ ಮಾಡಿದ್ದು, ಹೀಗೂ ವಂಚನೆ ಮಾಡ್ತಾರೆ ಅಂತ ಅರಿವು ಮೂಡಿಸೋ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಯಾರದ್ದೇ ಫೇಕ್​ ಕರೆಗಳು ಬಂದರೆ ಎಚ್ಚರದಿಂದ ಮಾತಾಡಿ ಎಂದು ಕರೆ ನೀಡಿದ್ದಾರೆ.

 

 

Font Awesome Icons

Leave a Reply

Your email address will not be published. Required fields are marked *