ಟಿ-20 ವಿಶ್ವಕಪ್ ಮೇಲೂ ಉಗ್ರರ ಕರಿನೆರಳು: ಬಿಗಿ ಭದ್ರತೆಗೆ ನಿರ್ಧಾರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಗಯಾನ,ಮೇ,6,2024 (www.justkannada.in): ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ  ಟಿ-20 ವಿಶ್ವಕಪ್ ​ಗೆ ಉಗ್ರರ ಕರಿನೆರಳು ಬಿದ್ದಿದೆ.  ಟೂರ್ನಿಯ ವೇಳೆ ದಾಳಿ ನಡೆಸುವುದಾಗಿ ಪಾಕ್ ಮೂಲದ ಇಸ್ಲಾಮಿಕ್ ಕರೋಸಾನ್ ಉಗ್ರಗಾಮಿ ಸಂಘಟನೆ ಬೆದರಿಕೆಯೊಡ್ಡಿದೆ.

ಮಾಧ್ಯಮಗಳ ವರದಿ ಪ್ರಕಾರ ಉತ್ತರ ಪಾಕಿಸ್ತಾನದಿಂದ ಬೆದರಿಕೆಯೊಡ್ಡಲಾಗಿದ್ದು, ಪಾಕ್-ಅಫ್ಘಾನಿಸ್ತಾನದ ಉಗ್ರಗಾಮಿ ಸಂಘಟನೆ ಐಎಸ್‌ಖೋರಾಸನ್ ಟೂರ್ನಿ ನಡುವೆ ಹಿಂಸಾಚಾರವನ್ನು ಪ್ರಚೋದಿಸಲು ಮುಂದಾಗಿದೆ ಎಂದು ಗುಪ್ತಚರ ವರದಿಗಳು ತಿಳಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹಾಗೂ ಯುಎಸ್​ಎ ಟಿ20 ವಿಶ್ವಕಪ್​ ವೇಳೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

ಈ ಟಿ-20 ವಿಶ್ವಕಪ್​ನಲ್ಲಿ ಭಾರತ ಸೇರಿದಂತೆ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು,  ಇದು ಅತ್ಯಂತ ದೊಡ್ಡ ಟಿ20 ವಿಶ್ವಕಪ್ ಟೂರ್ನಿ ಆಗಿರಲಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟೂರ್ನಿ ಆಯೋಜಿಸಲಾಗುತ್ತಿದ್ದು, ಇಡೀ ವಿಶ್ವದ ಕಣ್ಣು ಇದರತ್ತ ನೆಟ್ಟಿದೆ. ಹೀಗಿರುವಾಗ ಈ ಬೆದರಿಕೆ ಟೂರ್ನಿಯ ಭದ್ರತೆಯ ಬಗ್ಗೆ ಆಯೋಜಕರ ಆತಂಕವನ್ನು ಹೆಚ್ಚಿಸಿದೆ.

Key words: T-20 World Cup, terrorists, tight security

Previous articleನಾಳೆಯಿಂದ ಮೇ 12ರವರೆಗೆ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Font Awesome Icons

Leave a Reply

Your email address will not be published. Required fields are marked *