ಚಿಕನ್ ಶವರ್ಮಾ ವಿಷ ಏಕಾಗ್ತಿದೆ ಗೊತ್ತ; ಇದನ್ನೊಮ್ಮೆ ಓದಿ

ಮುಂಬೈ: ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ ಮಾಡುವುದಕ್ಕೆ ಪೂರೈಸಿದರು ಇದರಿಂದಲೇ ಈ ಸಾವು ಸಂಭವಿಸಿದೆ ಎಂದು ವರದಿ ಆಗಿದೆ.

ಇನ್ನು ಆಹಾರ ತಜ್ಷರ ಪ್ರಕಾರ,  ಈ ಶವರ್ಮಾದ ರೆಸಿಪಿಯಲ್ಲಿ ಮಾತ್ರ ಸಮಸ್ಯೆ ಇಲ್ಲ, ಆದರೆ ಅದರ ತಯಾರಿಗೆ ಬಳಸುವ ಹಲವು ಪದಾರ್ಥಗಳು ಅದರಲ್ಲೂ ವಿಶೇಷವಾಗಿ ಚಿಕನ್ ಕೂಡ ವಿಷಾಹಾರಕ್ಕೆ ಕಾರಣವಾಗುತ್ತಿದೆ. ಅದನ್ನು ಮಾಡುವ ರೀತಿ ಹಾಗೂ ಅದನ್ನು ಸಂಗ್ರಹಿಸುವ ರೀತಿ ಕೂಡ ಇದಕ್ಕೆ ಕಾರಣವಾಗಿದೆ. ಅರ್ಧ ಬೇಯಿಸಿದ ಮಾಂಸ ಹಾಗೂ ಮಾಂಸವನ್ನು ಫ್ರಿಡ್ಜ್‌ನಲ್ಲಿ ಸಮರ್ಪಕ ರೀತಿಯಲ್ಲಿ ಇಡದೇ ಇರುವುದು ಕೂಡ ಆಹಾರ ವಿಷವಾಗುವುದಕ್ಕೆ ಕಾರಣವಾಗುತ್ತಿದೆ.
Ckm (1)

ಶವರ್ಮಾಕ್ಕಾಗಿ ಬಳಸುವ ಮಾಂಸದ ತುಂಡುಗಳನ್ನು ಬಹಳ ನಿಧಾನವಾಗಿ ಕೇವಲ ತುಂಬಾ ಪ್ರಖರವಲ್ಲದ ಬೆಂಕಿಯ ಜ್ವಾಲೆಯನ್ನು ಬಳಸಿಕೊಂಡು ರೋಸ್ಟ್ ಮಾಡಲಾಗುತ್ತದೆ. ಇದರಿಂದ ಮಾಂಸವೂ ಸರಿಯಾಗಿ ಬೇಯುವುದಿಲ್ಲ, ಆದರೂ ಇದಕ್ಕೆ ಬಹಳ ಸಮಯ ಹಿಡಿಯುವುದರಿಂದ ಜನ ಹೆಚ್ಚಾದ ಸಮಯದಲ್ಲಂತೂ ಅನೇಕ ಗ್ರಾಹಕರಿಗೆ ಸರಿಯಾದ ಬೇಯದ ಮಾಂಸದಿಂದ ತಯಾರಿಸಿದ ಶವರ್ಮಾ ಸಿಗುವುದು.

ಅರ್ಧ ಬೇಯಿಸಿದ ಮಾಂಸದ ಜೊತೆಗೆ ಅದನ್ನು ಸರಿಯಾದ ಅದನ್ನು ರೆಪ್ರಿಜರೇಟರ್‌ನಲ್ಲಿಯೂ ಸರಿಯಾಗಿ ಇಡದಿದ್ದಾಗಲೂ ಅರ್ಧ ಬೇಯಿಸಿದ ಚಿಕನ್ ವಿಷವಾಗುವುದು, ಅಲ್ಲದೇ ಇದು ಅಪಾಯಕಾರಿಯಾ ಬ್ಯಾಕ್ಟಿರೀಯಾಗಳಾದ ಸಾಲ್ಮೊನೆಲ್ಲಾ ಅಥವಾ ಇ.ಕೋಲಿ ಮುಂತಾದ ಬ್ಯಾಕ್ಟಿರೀಯಾಗಳನ್ನು ಉತ್ಪಾದಿಸಬಹುದು ಎಂದು ಉಜಾಲಾ ಸೈನಸ್ ಗ್ರೂಪ್ ಆಫ್ ಹಾಸ್ಪಿಟಲ್‌ನ ವೈದ್ಯ ಡಾ ಸುಚಿನ್ ಬಜಾಜ್ ಹೇಳಿದ್ದಾರೆ.

ಶುಚಿತ್ವವಿಲ್ಲದ ಅರ್ಧ ಬೇಯಿಸಿದ ಅಥವಾ ಕಲುಷಿತ ಆಹಾರ ಅಥವಾ ನೀರು ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುತ್ತದೆ ಇದು ತುಂಬಾ ಸಾಂಕ್ರಾಮಿಕವಾಗಿರುವ ಕರುಳಿ ಸೋಂಕಿಗೆ ಕಾರಣವಾಗುತ್ತದೆ.  ಅದಕ್ಕಿಂತ ಹೆಚ್ಚಾಗಿ ಶುಚಿತ್ವದ ಕಳಪೆ ನಿರ್ವಹಣೆ, ಕಲುಷಿತ ಪಾತ್ರಗಳು, ಕೆಟ್ಟು ಹೋದ ಸಾಸ್, ಅಥವಾ ಪದಾರ್ಥಗಳು ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಅಲ್ಲದೇ  ಬಹಳ ದಿನಗಳವರೆಗೆ ಮಾಂಸವನ್ನು ಪ್ರಿಡ್ಜ್‌ನಲ್ಲಿ ಇಡುವುದು ಕೂಡ ಗಂಭೀರವಾದ ಬ್ಯಾಕ್ಟಿರಿಯಾಗಳ ಉತ್ಪಾದನೆಗೆ ಕಾರಣವಾಗುತ್ತದೆ ಎಂಬುದು ಆಹಾರ ತಜ್ಷರ ಮಾತು.

Font Awesome Icons

Leave a Reply

Your email address will not be published. Required fields are marked *