ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ನವದೆಹಲಿ: ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ ಬೀವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗೈದ ಸಾಧಕರಿಗೆ ಹಲವು ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವೈಜಯಂತಿ ಮಾಲಾ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದರೆ, ಫಾತಿಮಾ ಬೀವಿ, ಹಾರ್ಮುಸ್ಜಿ ಎನ್ ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ನೀಡಲಾಯಿತು. ಬೀವಿ, ವಿಜಯಕಾಂತ್ ಮತ್ತು ರಿಂಪೋಚೆ ಅವರ ಕುಟುಂಬದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.

`ಬಾಂಬೆ ಸಮಾಚಾರ್’ ಪತ್ರಿಕೆ ಮಾಲೀಕ ಹಾರ್ಮುಸ್ಜಿ ಎನ್ ಕಾಮಾ , ಬಿಜೆಪಿ ನಾಯಕ ಓ.ರಾಜಗೋಪಾಲ್, ಲಡಾಖ್‍ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೋಚೆ, ತಮಿಳು ನಟ ದಿವಂಗತ ಕ್ಯಾಪ್ಟನ್ ವಿಜಯಕಾಂತ್, ಗುಜರಾತಿ ಪತ್ರಿಕೆ `ಜನ್ಮಭೂಮಿ’ ಸಿಇಒ ಕುಂದನ್ ವ್ಯಾಸ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

2024 ರಲ್ಲಿ 5 ಪದ್ಮ ವಿಭೂಷಣ, 17 ಪದ್ಮ ಭೂಷಣ ಮತ್ತು 110 ಪದ್ಮ ಪ್ರಶಸ್ತಿ ಸೇರಿದಂತೆ 132 ಪ್ರಶಸ್ತಿಗಳನ್ನು ರಾಷ್ಟ್ರಪತಿ ಘೋಷಿಸಿದ್ದರು. ಹೆಚ್ಚಿನ ಸಾಧಕರಿಗೆ ಏ.22 ರಂದು ಪ್ರಶಸ್ತಿ ನೀಡಲಾಗಿತ್ತು.

Font Awesome Icons

Leave a Reply

Your email address will not be published. Required fields are marked *