ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸತ್ರ ನ್ಯಾಯಾಲಯ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೀದರ್‌: ಹೆಂಡತಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಬೀದರ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಮಹಾರಾಷ್ಟ್ರದ ಸೋನಾಳವಾಡಿಯ ರಮೇಶ ಆನಂದರಾವ್‌ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ಕಠಿಣ ಕಾರಾಗೃಹ ವಾಸದ ಜೀವಾವಧಿ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ವಾದ ಮಂಡಿಸಿದರು.

ಮಹಾರಾಷ್ಟ್ರದ ಕೋತಳಿ ಗ್ರಾಮದ ಶ್ರೀಹರಿ ಜಂಪಾವಾಡ ಅವರ ಮಗಳಾದ ಸುನೀತಾ ಅಲಿಯಾಸ್‌ ಚಿತ್ರಕಲಾ ಇವರಿಗೆ ಸೋನಾಳವಾಡಿ ಗ್ರಾಮದ ರಮೇಶ ಆನಂದರಾವ ಅವರೊಂದಿಗೆ ಒಂಬತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳಾಗಿದ್ದರು.

ರಮೇಶ, ತನ್ನ ಹೆಂಡತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. 2018ರ ಡಿಸೆಂಬರ್‌ 28ರಂದು ಹೆಂಡತಿಯೊಂದಿಗೆ ಜಗಳವಾಡಿ ಹೊಡೆದು, ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಕಮಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್‌ ಅಧಿಕಾರಿ ದಿಲೀಪ್‌ಕುಮಾರ ಬಿ. ಸಾಗರ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Font Awesome Icons

Leave a Reply

Your email address will not be published. Required fields are marked *