ಬೆಳ್ಳಂಬೆಳಗ್ಗೆ ಬಂದು ಮತದಾನ ಮಾಡಿದ ನಟ ಗಣೇಶ್ ದಂಪತಿ

ಬೆಂಗಳೂರು: ಲೋಕಸಭಾ  ಚುನಾವಣೆಯ  ಮತದಾನ ಪ್ರಕ್ರಿಯೆಯಲ್ಲಿ ಸೆಲೆಬ್ರಿಟಿಗಳು ಅತ್ಯಂತ ಹುಮ್ಮಸ್ಸಿನಿಂದ  ಭಾಗಿಯಾಗಿದ್ದಾರೆ.

ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್  ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಬೆಳಗ್ಗೆ 7.20ಕ್ಕೆ ಆಗಮಿಸಿ  ಮತದಾನ ಮಾಡಿ, ಮಾದರಿಯಾದರು.

ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು. ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.

ತಪ್ಪದೇ ಮತದಾನ ಮಾಡಿ ಎಂದು ಈವರೆಗೂ ಪ್ರಚಾರ ಮಾಡುತ್ತಿದ್ದ ನಟ ನಟಿಯರು ತಮ್ಮ ಜವಾಬ್ದಾರಿಯನ್ನು  ನಿಭಾಯಿಸಿ ಮಾದರಿಯಾಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *