ಪ್ರಕೃತಿ ವೈಪರೀತ್ಯದಿಂದ ರೈತರಲ್ಲಿ ಆತಂಕ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕಲಬುರಗಿ:  ಅಫಜಲಪುರ ತಾಲ್ಲೂಕಿನ ರೇವೂರ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಇಷ್ಟು ಸಮಸ್ಯೆಗಳ ನಡುವೆಯೂ ಏಳು ತಿಂಗಳಿಂದ ಶ್ರಮ ವಹಿಸಿ ಬೆಳೆ ಬೆಳೆದ ಬಾಳೆ ಸದ್ಯ ಗೊನೆ ಹಾಕುತ್ತಿವೆ.

ಈ ಸಮಯದಲ್ಲಿ ಅಧಿಕ ನೀರು ಬೇಕು. ಮಳೆ ಕೊರತೆಯಿಂದ ಕಬ್ಬು, ಲಿಂಬೆ, ಕಲ್ಲಂಗಡಿ, ತರಕಾರಿ ಬೆಳೆಯಲು ಸಹ ನೀರಿನ ಕೊರತೆ ಎದುರಾಗಿದೆ.

‘ನೀನು ನನ್ನ (ಬಾಳೆ) ನೀರಿನಲ್ಲಿ ನಿಲ್ಲಿಸಿದರೆ ನಾನು ನಿನ್ನ ಊರಿನಲ್ಲಿ ನಿಲ್ಲಿಸುತ್ತೆನೆ’ ಎನ್ನುವ ಮಾತೊಂದು ಇತ್ತು. ಆದರೆ ಈ ವರ್ಷ ಬಹುತೇಕ ಜಲಮೂಲಗಳು ಬತ್ತಿವೆ. ಅಂತರ್ಜಲಮಮಟ್ಟವೂ ಕುಸಿದಿದೆ. ಬರಕ್ಕೆ ಸವಾಲು ಎನ್ನುವಂತೆ ರೈತರು ತಮ್ಮ ಬೆಳೆಯನ್ನು ಬಿಸಿಲಿನ ಝಳದಿಂದ ರಕ್ಷಿಸಲು ಜಮೀನಿನ ಸುತ್ತ ಶೆಡ್‌ನೆಟ್ (ಹಸಿರು ಬಣ್ಣದ ಬಟ್ಟೆ) ಸುತ್ತಿದ್ದಾರೆ. ಅಲ್ಲದೆ ಬೇರೆ ರೈತರರಿಂದ ನೀರು ಪಡೆದು ತಮ್ಮ ಬೆಳೆಗೆ ಹಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಶಂಕರರಾವ ಭಾಮಣಿ ಪಾಟೀಲ, ರೇವೂರ ರೈತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಇಷ್ಟಾದರೂ ಮುಂದೆ ಫಸಲಿಗೆ ಬೆಲೆ ಸಿಗುತ್ತದೆ ಎನ್ನವ ಯಾವ ನಂಬಿಕೆಯೂ ಇಲ್ಲ. ಎಲ್ಲ ದೇವರ ಆಟ.

ಕೆಲ ರೈತರು ಎರಡು ತಿಂಗಳಿಂದ ತಮ್ಮ ಕೃಷಿ ಹೊಂಡಕ್ಕೆ ಪ್ಲಾಸ್ಟಿಕ್ ಹಾಕಿ ನೀರು ತುಂಬಿಸಿ ಮೋಟರ್ ಮೂಲಕ ಬೆಳೆಗೆ ಹರಿಸುತ್ತಿದ್ದಾರೆ. 2.5 ಕಿ.ಮೀ ದೂರದಿಂದ ನಿತ್ಯ 4 ಸಾವಿರ ಲೀಟರ್ ಸಾಮರ್ಥ್ಯದ 11ರಿಂದ 12 ಟ್ಯಾಂಕರ್ ನೀರು ಖರೀದಿ ಮಾಡಿ ಹರಿಸುತ್ತಿದ್ದರೆ.

ಬೆಳೆ ರಕ್ಷಿಸಲು ಇನ್ನೂ ಎರಡು ತಿಂಗಳು ಇದೇ ರೀತಿ ಮಾಡುವ ಅನಿವಾರ್ಯತೆ ರೈತರಿಗೆ ಎದುರಾಗಿದೆ.ಕೊಳವೆ ಬಾವಿಗಳು ದಿನಕ್ಕೆ ಒಂದು ಗಂಟೆ ಮಾತ್ರ ನೀರು ಎತ್ತಿ ಬಳಿಕ ಬಂದ್‌ ಆಗುತ್ತಿದ್ದು ಬೋರ್‌ವೆಲ್ ಹಾಕಿಸಿದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ‘ನಮ್ಮ ಜಮೀನಿನಲ್ಲಿರುವ ನಾಲ್ಕು ಕೊಳವೆಬಾವಿಗಳ ನೀರನ್ನು ಕೃಷಿ ಹೊಂಡದಲ್ಲಿ ಶೇಖರಣೆ ಮಾಡಿ ಅಲ್ಲಿಂದ ಹನಿ ನೀರಾವರಿ ಮೂಲಕ ಗಿಡಗಳಿಗೆ ಹರಿಸುತ್ತೇವೆ. ಒತ್ತಡ ಹೆಚ್ಚಿರುವುದರಿಂದ ಕೊನೆಯ ಗಿಡದವರೆಗೂ ನೀರು ತಲುಪುತ್ತದೆ’ ಎನ್ನುತ್ತಾರೆ ರೈತ ರಾಜೇಂದ್ರ.

ಸಿದ್ಧರಾಮ, ರೈತಝಳದಿಂದ ಬೆಳೆ ರಕ್ಷಣೆಗೆ ಸೆಡ್‌ನೆಟ್ ( ಹಸಿರು ಬಣ್ಣದ ಬಟ್ಟೆ) ಸುತ್ತಿದ್ದೇವೆ. ಸಾಮಾನ್ಯ ಖರ್ಚಿನ ಜತೆ ಇದೂ ಹೊರೆಯಾಗಿದೆ. ಬೇರೆಯವರ ರೈತ ಹೊಲದಿಂದ ನೀರು ಪಡೆದಿದ್ದೇನೆ.

‘ಮಳೆ ಕೊರತೆಯಾಗುತ್ತದೆ ಎನ್ನುವುದನ್ನು ಮೊದಲೇ ತಿಳಿದು ಬಾಳೆ ಎಲೆ ಕತ್ತರಿಸಿ ಗಿಡಗಳ ನಡುವೆ ಹಾಕಿದ್ದೇವೆ. ಗಾಳಿ ನೇರವಾಗಿ ಭೂಮಿಗೆ ತಾಗುವುದಿಲ್ಲ. ನೀರು ಬಿಟ್ಟರೆ ತೇವಾಂಶ ಬೇಗ ಆರುವುದಿಲ್ಲ. ಅಲ್ಲದೇ ಅದು ಕೊಳೆತು ಗೊಬ್ಬರವಾಗುತ್ತದೆ’ ಎಂದು ರೈತ ಲಕ್ಷ್ಮಿಪುತ್ರ ಚಲಗೇರಿ ತಿಳಿಸಿದರು.

Font Awesome Icons

Leave a Reply

Your email address will not be published. Required fields are marked *