ಬಡೆ ಮಿಯಾ ಚೋಟೆ ಮಿಯಾ ಸಿನಿಮಾದ ಟ್ರೇಲರ್ ರಿಲೀಸ್

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್  ಹಾಗೂ ಟೈಗರ್ ಶ್ರಾಫ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಐದು ಭಾಷೆಯಲ್ಲಿಯೂ ಮೊದಲ ಟ್ರೇಲರ್ ರಿಲೀಸ್ ಆಗಿದೆ.  3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.

ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Font Awesome Icons

Leave a Reply

Your email address will not be published. Required fields are marked *