ಮತ ಚಲಾಯಿಸಲು ಅಹಮದಾಬಾದ್‌ಗೆ ಆಗಮಿಸಲಿರುವ ಪ್ರಧಾನಿ ಮೋದಿ

ಗುಜರಾತ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಅಹಮದಾಬಾದ್‌ಗೆ ಭೇಟಿ ನೀಡಲಿದ್ದು, ಅಲ್ಲಿನ ಶಾಲೆಯೊಂದರಲ್ಲಿ ಮತ ಚಲಾಯಿಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ಸಲುವಾಗಿ ಪ್ರಧಾನಿ ಮೋದಿ ನಿಶಾನ್‌ ಶಿಕ್ಷಣ್‌ ಸಂಕುಲ್‌ ಶಾಲೆಗೆ ಭೇಟಿ ನೀಡಲಿದ್ದು, ಬೆಳಗ್ಗೆ 7:30ಕ್ಕೆ ಸರಿಯಾಗಿ ಅವರು ಆಗಮಿಸುವ ನಿರೀಕ್ಷೆಯಿದೆ.

ಈ ಬಾರಿಯ ಬೇಸಿಗೆಯ ಬಿಸಿ ಅತಿ ಅಧಿಕವಿರುವುದು ಮತದಾನ ಪ್ರಮಾಣದ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪರಿಹಾರವೆಂಬಂತೆ ಆದಷ್ಟು ಬೇಗ ಬಂದು ಮತ ಚಲಾಯಿಸಿ ಎಂದು ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.

ಮೋದಿ ಭೇಟಿಯ ಹಿನ್ನಲೆಯಲ್ಲಿ ಶಾಲೆಗೆ ಬಿಗಿಭದ್ರತೆ ಒದಗಿಸಲಾಗಿದೆ.

ಮತ ಚಲಾವಣೆಯ ನಂತರ ಮೋದಿ ತಮ್ಮ ಶಾಯಿಯ ಬೆರಳನ್ನು ತೋರಿಸಿ ಜನರನ್ನುದ್ದೇಶಿಸಿ ಕೆಲ ಮಾತುಗಳನ್ನಾಡಿದ ಬಳಿಕ ಸಮೀಪದಲ್ಲಿ ವಾಸವಿರುವ ಸಹೋದರ ಸೋಮಾಭಾಯಿ ಮೋದಿಯವರನ್ನು ಭೇಟಿಯಾಗಲಿದ್ದಾರೆ.

Font Awesome Icons

Leave a Reply

Your email address will not be published. Required fields are marked *