ಮಾಲೀಕ ಪೊಲೀಸರ ವಶಕ್ಕೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಚೆನ್ನೈ: ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ ಉದ್ಯಾನವನದಲ್ಲಿ ನಡೆದಿದೆ.

ನಾಯಿಗಳ ಮಾಲೀಕ ಅವುಗಳನ್ನು ಲೂಸ್ ಬಿಟ್ಟ ಪರಿಣಾಮ ನಾಯಿಗಳು ಬಾಲಕಿಯ ಮೇಲೆರಗಿದೆ. ದಾಳಿ ನಡೆದ ತಕ್ಷಣ ಬಾಲಕಿಯ ತಾಯಿ ಆಕೆಯನ್ನು ರಕ್ಷಿಸಲು ಧಾವಿಸಿದ್ದಾರೆ. ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಿಗಳ ಮಾಲೀಕರನ್ನು ಬಂಧಿಸಿದ್ದಾರೆ.

ನಾವು ಮಾಲೀಕರನ್ನು ಬಂಧಿಸಿದ್ದೇವೆ ಮತ್ತು ನಾಯಿಗಳನ್ನು ನೋಡಿಕೊಳ್ಳುವ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೇಖರ್ ದೇಶಮುಖ್ ತಿಳಿಸಿದ್ದಾರೆ.

ಪಾರ್ಕ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಎರಡು ನಾಯಿಗಳು ಬಾಲಕಿಯ ಮೇಲೆ ದಾಳಿ ಮಾಡುವ ದೃಶ್ಯ ಸೆರೆಯಾಗಿದೆ. ರಾಟ್‌ವೀಲರ್ ದಾಳಿಗೊಳಗಾದ ಸುದಕ್ಷ ಎಂಬ ಐದು ವರ್ಷದ ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Font Awesome Icons

Leave a Reply

Your email address will not be published. Required fields are marked *