ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದಿದಕ್ಕೆ ಅಣ್ಣನನ್ನೇ ಕೊಂದ ತಂಗಿ

ಛತ್ತೀಸಗಢ : ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದು ತಿಳಿಹೇಳಿದಕ್ಕೆ ತಂಗಿಯೊಬ್ಬಳು ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. 14 ವರ್ಷದ ಬಾಲಕಿ ಮೊಬೈಲ್​ಗೆ ಅಡಿಕ್ಟ್​ ಆಗಿದ್ದಳು, ಹುಡುಗರೊಂದಿಗೆ ಹೆಚ್ಚು ಕಾಲ ಮಾತನಾಡುತ್ತಿದ್ದಳು, ಇದನ್ನು ಅರಿತ ಅಣ್ಣ ತಂಗಿಗೆ ಬುದ್ಧಿವಾದ ಹೇಳಿದ್ದ. ಇದಕ್ಕೆ ಕೋಪಗೊಂಡ ಬಾಲಕಿ ಅಣ್ಣನನ್ನು ಹತ್ಯೆ ಮಾಡಿದ್ದಾಳೆ.

ಮೊಬೈಲ್ ಫೋನ್‌ನಲ್ಲಿ ಹುಡುಗರೊಂದಿಗೆ ಮಾತನಾಡುತ್ತೀಯ ಎಂದು ಬೈದಿದ್ದ, ಇನ್ನು ಮುಂದೆ ಫೋನ್ ಬಳಸದಂತೆ ತಿಳಿ ಹೇಳಿದ್ದ. ಬಳಿಕ ಅಣ್ಣ(18) ಮಲಗಿದಾಗ ಕೊಡಲಿಯಿಂದ ಕುತ್ತಿಗೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಬಾಲಕಿ ಸ್ನಾನ ಮಾಡಿ ತನ್ನ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ತನ್ನ ಅಣ್ಣನನ್ನು ಯಾರೋ ಹತ್ಯೆ ಮಾಡಿದ್ದಾರೆ ಎಂದು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಸದ್ಯ ಆಕೆ ಮಾಡಿದ ಅಪರಾದಧಕ್ಕಾಗಿ ಪೊಲೀಸರು ಅಕೆಯನ್ನು ಬಂಧಿಸಿದ್ದಾರೆ

Font Awesome Icons

Leave a Reply

Your email address will not be published. Required fields are marked *