ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ಹೈದರಾಬಾದ್‌ :  ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಬರೋಬ್ಬರಿ 10 ವಿಕೆಟ್​ಗಳಿಂದ ಮಣಿಸಿದೆ.

ಗೆಲುವಿಗೆ ಲಕ್ನೋ ನೀಡಿದ 165 ರನ್​ಗಳ ಗುರಿಯನ್ನು ಹೈದರಾಬಾದ್‌ ತಂಡ ಕೇವಲ 9.4 ಓವರ್​ಗಳಲ್ಲಿ ಬೆನ್ನಟ್ಟಿತು. ಹೈದರಾಬಾದ್‌ ತಂಡದ ಆರಂಭಿಕರಿಬ್ಬರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 58 ಎಸೆತಗಳಲ್ಲಿ ಲಕ್ನೋ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರು.

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪವರ್ ಪ್ಲೇನಲ್ಲಿ 107 ರನ್ ಕಲೆಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಓವರ್​ಗಳಲ್ಲಿ ಎರಡನೇ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಬರೆಯಿತು. ಮೊದಲ ಅತ್ಯಧಿಕ ರನ್ ದಾಖಲೆಯೂ ಈ ಜೋಡಿಯ ಹೆಸರಿನಲ್ಲೇ ಇದ್ದು, ಈ ಜೋಡಿ ಡೆಲ್ಲಿ ವಿರುದ್ಧ 125 ರನ್ ಕಲೆಹಾಕಿತ್ತು.

Font Awesome Icons

Leave a Reply

Your email address will not be published. Required fields are marked *