ಸ್ಥಳಕ್ಕೆ ಉಮೇಶ ಜಾಧವ್ ಭೇಟಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕಲಬುರಗಿ: ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ ಕೇಳಿ ಬಂದಿದೆ.

ಪೋಲಿಂಗ್ ಅಧಿಕಾರಿಯೇ ಕಾಂಗ್ರೆಸ್ ಗೆ ಮತ ಚಲಾಯಿಸಿದ ಆರೋಪ ಕೇಳಿ ಬಂದ ತಕ್ಷಣ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಡಾ.ಉಮೇಶ ಜಾಧವ್ ಮತಗಟ್ಟೆಗೆ ತೆರಳಿ ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡರಲ್ಲದೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ದೂರು ಸಲ್ಲಿಸಿದರು.

ಮತಗಟ್ಟೆ ಅಧಿಕಾರಿಯೇ ಮತದಾರರೊಬ್ಬರ ಸಹಾಯ ಮಾಡುವ ನಿಟ್ಟಿನಲ್ಲಿ ಅವರ ಮತವನ್ನು ಕಾಂಗ್ರೆಸ್ ಗೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದನ್ನು ಕೇಳಿದ ಅಲ್ಲೇ ಇದ್ದ ಮಾಜಿ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ತೀವ್ರ ಆಕ್ಷೇಪಿಸಿದರು. ತಕ್ಷಣವೇ ಡಾ. ಜಾಧವ್ ಆಗಮಿಸಿ, ಇದು ಸರಿಯಲ್ಲ. ತಾವೇ ಹೀಗೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಅದೇ ರೀತಿ ಕಲಬುರ್ಗಿ ಉತ್ತರ ಮತಕ್ಷೇತ್ರದಲ್ಲಿ ಪೋಲಿಂಗ್ ಬೂತ್ ಸಂಖ್ಯೆ 38 ತಾಜ್ ಕಾಲೇಜ್, 71 ಶೇಖ್ ರೋಜಾ, 151& 152 ಮೊಮಿನ್ಪುರಾ, 266 ರೋಜಾ ಕಾಲೋನಿ, 113 ಉಮರ್ ಕಾಲೋನಿ ಗಳಲ್ಲಿ ಬಿಜೆಪಿ ಪಕ್ಷದ ಪೋಲಿಂಗ್ ಏಜೆಂಟರನ್ನು ಕಾಂಗ್ರೆಸ್ ಕಾರ್ಯಕರ್ತರು ಒಳಗೆ ಬಿಡದ ಘಟನೆಗಳು ಸಹ ವರದಿಯಾಗಿವೆ. ಇದನ್ನು ಕಂಡೂ ಪೋಲಿಂಗ್ ಅಧಿಕಾರಿಗಳು ಕೂಡ ಮೌನ ವಹಿಸಿದ್ದಾರೆನ್ನಲಾಗಿದೆ.

Font Awesome Icons

Leave a Reply

Your email address will not be published. Required fields are marked *