ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಬಾಂಬ್ ರೀತಿ ಸಿಡಿದ ಓಮಿನಿ ಕಾರು

ದಾವಣಗೆರೆ: ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ ತಾಲೂಕಿನ ದೊಡ್ಡಬೂದಿಹಾಳ್‌ ಗ್ರಾಮದಲ್ಲಿ ನಡೆದಿದೆ.

ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್​ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಇಂದು ಇದ್ದಕ್ಕಿದ್ದಂತೆ ಸಿಲಿಂಡರ್​ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಂಬ್ ರೀತಿ ಓಮಿನಿ ಕಾರು ಸಿಡಿದಿದೆ. ಬಾಂಬ್ ರೀತಿ ಸಿಡಿದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಈ ಘಟನೆ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Font Awesome Icons

Leave a Reply

Your email address will not be published. Required fields are marked *