ಗ್ಯಾರಂಟಿ ಕುರಿತ ಹೆಚ್‌ಡಿಕೆ ಹೇಳಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಹೊಳೆನರಸೀಪುರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯ ಪಡೆಯುತ್ತಿರುವ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿ ಇದೀಗ ಕಾಂಗ್ರೆಸ್ ಪಕ್ಷದ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.

ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರುತಿ ಗುಂಡೇಗೌಡ ಪಟ್ಟಣದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ ಮಾತನಾಡಿ ಸರ್ಕಾರದ ಗ್ಯಾರಂಟಿಗಳು ಪಕ್ಷಾತೀತವಾಗಿ ಎಲ್ಲರೂ ಪಡೆಯುತ್ತಿದ್ಧಾರೆ.

ಈ ಗ್ಯಾರಂಟಿಗಳಿಂದ ಅದೇಷ್ಟೊ ಕುಟುಂಬಗಳು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ತಿಳಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ದಾರಿತಪ್ಪುತ್ತಿದ್ದಾರೆ ಎಂಬ ಹೇಳಿಕೆ ಮಹಿಳೆಯರನ್ನು ಹೀಯಾಳಿಸುವ ಮಟ್ಟಕ್ಕೆ ಹೋಗಿರುವುದು ವಿಷಾದನೀಯ , ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಮಹಿಳೆಯನ್ನು ಕ್ಷಮೆಯಾಚಿಸದೆ ಹೋದಲ್ಲಿ ಬೀದಿಗಿಳಿದು ನಿಮ್ಮ ವಿರುದ್ದ ರಾಜ್ಯದೆಲ್ಲಡೆ ಪ್ರತಿಭಟನೆಗೆ ಇಳಿಯಬೇಕಾದೀತೆಂದು ಎಚ್ಚರಿಸಿದರು.

ಮಹಿಳೆಯರ ತೇಜೋವದೆ ಮಾಡಿರುವ ಕುಮಾರಸ್ವಾಮಿ ಅವರೇ ನಿಮ್ಮ ಹೇಳಿಕೆಯಿಂದ ಮಹಿಳಾ ಸಮುದಾಯವನ್ನು ತುಚ್ಚವಾಗಿಕಂಡಿರುವುದು ಸರಿಯಲ್ಲಿ ತತ್ ಕ್ಸಣ ಕ್ಷಮೆಯಾಚಿಸದೇ ಹೋದಲ್ಲಿ ಮಹಿಳೆಯರಾದ ನಾವುಗಳು ಪೊರಕೆ ಹಿಡಿದು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ನಮಗೆ ಮನೆಯಲ್ಲಿನ ಕಸವನ್ನು ಗುಡಿಸಿದ ಹೊರಹಾಕುವುದು ಗೊತ್ತು ಜೊತೆಗೆ ನಿಮ್ಮಂತವರನ್ನು ಪೊರಕೆಯಿಂದ ಗುಡಿಸಿ ಮೂಲೆಗುಂಪು ಮಾಡುವುದು ಸಹ ಗೊತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಅವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಹಿಳಾ ವಿರೋಧಿ ಹೇಳಿಕೆಯಿಂದ ಮಹಿಳೆಯನ್ನು ತುಚ್ಚಾವಾಗಿ ಸಂಭೋದಿಸಿರುವುದು ಸರಿಯಲ್ಲ, ಆದ್ದರಿಂದ ತಕ್ಷಣ ಕುಮಾರಸ್ವಾಮಿ ಅವರು ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಮಹಿಳಾ ಮುಖಂಡರುಗಳಾದ ಪಾರ್ವತಿ, ತುಳಸಿ ಸೇರಿದಂತೆ ಮಹಿಳಾ ಕಾರ್ಯಕರ್ತರುಗಳು ಇದ್ದರು. ಪ್ರತಿಭಟನೆಗೆ ಮೊದಲು ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರುತಿ ಗುಂಡೇಗೌಡ ಅವರು ಸುದ್ದಿಗೋಷ್ಟಿ ನಡೆಸಿದರು.

Font Awesome Icons

Leave a Reply

Your email address will not be published. Required fields are marked *