ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ಗೆ 6 ವಿಕೆಟ್‌ಗಳ ಜಯ

ಚೆನ್ನೈ: ಚೆನ್ನೈನಲ್ಲಿ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್‌ ಗೆದ್ದ ಕೆ.ಎಲ್‌.ರಾಹುಲ್‌ ಪಡೆ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭದಲ್ಲೇ ಆಘಾತ ಎದುರಿಸಿತು. ಅಜಿಂಕ್ಯ ರಹಾನೆ ಕೇವಲ 1 ರನ್‌ ಗಳಿಸುತ್ತಿದ್ದಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ ಶತಕ ಗಳಿಸಿ ಗಮನ ಸೆಳೆದರು. ಚೆನ್ನೈ ತಂಡದ ಇತಿಹಾಸದಲ್ಲೇ ನಾಯಕ ಸಿಡಿಸಿದ ಮೊದಲ ಶತಕ ಎಂಬ ದಾಖಲೆಯನ್ನು ಗಾಯಕ್ವಾಡ್‌ ಬರೆದರು. ಗಾಯಕ್ವಾಡ್‌ ಔಟಾಗದೇ ಶತಕ ಸಿಡಿಸಿ (108 ರನ್‌, 60 ಬಾಲ್, 12‌ ಫೋರ್‌, 3 ಸಿಕ್ಸರ್‌) ಮಿಂಚಿದರು.

ಇವರಿಗೆ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ನೀಡಿದರು. ಗಾಯಕ್ವಾಡ್‌ ಮತ್ತು ಜಡೇಜಾ ಜೋಡಿ 39 ಬಾಲ್‌ಗೆ 52 ರನ್‌ಗಳ ಜೊತೆಯಾಟವಾಡಿತು. ಈ ವೇಳೆ ಜಡೇಜಾ 16 ರನ್‌ ಗಳಿಸಿ ಔಟಾದರು.

ಚೆನ್ನೈ ನಾಯಕ ಋತುರಾಜ್‌ ಶತಕದಾಟ ಮತ್ತು ಶಿವಂ ದುಬೆ ಸ್ಫೋಟಕ ಶೈಲಿಯ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 210 ರನ್‌ ಗಳಿಸಿತು.

211 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 3 ಬಾಲ್‌ ಬಾಕಿ ಇರುವಾಗಲೇ 4 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಗೆಲುವು ಸಾಧಿಸಿತು.

ಚೆನ್ನೈ ನೀಡಿದ 211 ರನ್‌ ಗುರಿ ಬೆನ್ನತ್ತಿದ ಲಕ್ನೋ ಕೂಡ ಆರಂಭಿಕ ಆಘಾತ ಎದುರಿಸಿತು. ಓಪನರ್‌ ಕ್ವಿಂಟನ್‌ ಡಿ ಕಾಕ್‌ 3 ಎಸೆತಗಳನ್ನು ಎದುರಿಸಲು ತಿಣುಕಾಡಿ ಕೊನೆಗೆ ಶೂನ್ಯ ವಿಕೆಟ್‌ ಒಪ್ಪಿಸಿ ಹೊರನಡೆದರು. ನಾಯಕ ಕೆ.ಎಲ್‌.ರಾಹುಲ್‌ ಕೂಡ ಕೇವಲ 16 ರನ್‌ಗಳಿಸಲಷ್ಟೇ ಶಕ್ತರಾದರು.

ಈ ವೇಳೆ ತಂಡಕ್ಕೆ ಆಸರೆಯಾದವರು ಸ್ಟೊಯಿನಿಸ್‌. ಕೊನೆವರೆಗೂ ಹೋರಾಡಿ ಲಕ್ನೋವನ್ನು ಗೆಲುವಿನ ದಡ ಸೇರಿದರು.

Font Awesome Icons

Leave a Reply

Your email address will not be published. Required fields are marked *