ಪ್ರಾಂಶುಪಾಲರ ವಿರುದ್ಧ ಸಾರ್ವಜನಿಕರ ಆಕ್ರೋಶ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ನಂಜನಗೂಡು : ಉತ್ತಮ ವಿದ್ಯಾಭ್ಯಾಸ ಪಡೆದು ಸರ್ಕಾರಿ ಕೆಲಸ ಸೇರಿಕೊಳ್ಳಲಿ ಎಂದು ಬೆಟ್ಟದಷ್ಟು ಆಸೆ ಹೊತ್ತು ಹೆತ್ತವರು ಕಾಲೇಜಿಗೆ ಕಳುಹಿಸಿದೆ ಇಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಬಿಟ್ಟು ಮೈ ಮರೆತು ತಮ್ಮ ಅಶ್ಲೀಲ ವರ್ತನೆಯನ್ನು ತೋರುತ್ತಿರುವ ಘಟನೆ ನಂಜನಗೂಡಿನ ಮಿನಿ ವಿಧಾನಸೌಧದ ಹಿಂಬದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ.

ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾಠ ಪ್ರವಚನಕ್ಕೆ ಬ್ರೇಕ್ ಹಾಕಿ ಗೆಳೆಯನ ಜೊತೆ ಸೇರಿ ಲವ್ವಿ ಡವ್ವಿ ಎಂದು ತುಟಿಗೆ ತುಟಿ ಕಚ್ಚುತ್ತಾರೆ. ಈ ದೃಶ್ಯವನ್ನು ನೋಡಿದ ಸಾರ್ವಜನಿಕರು ನಮ್ಮ ಮಕ್ಕಳನ್ನಂತೂ ಕಾಲೇಜಿಗೆ ಕಳಿಸುವುದೇ ಬೇಡ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ.

ವಿದ್ಯಾರ್ಥಿಗಳ ಈ ರೀತಿಯ ವರ್ತನೆ ನೋಡಿ ಸಾರ್ವಜನಿಕರೇ ಬೆಚ್ಚಿ ಬಿದ್ದಿದ್ದು, ದಿನನಿತ್ಯ ಸಾವಿರಾರು ಜನರು ಮಿನಿ ವಿಧಾನಸೌಧಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದರು, ಇದನ್ನು ಲೆಕ್ಕಿಸದೆ ಕಾಲೇಜು ವಿದ್ಯಾರ್ಥಿಗಳು ಮೈ ಮರೆತು ತಮ್ಮ ಅಶ್ಲೀಲ ಕೆಲಸದಲ್ಲಿ ಬ್ಯುಸಿಯಾಗಿ ಬಿಟ್ಟಿರುತ್ತಾರೆ.

ಕಾಲೇಜು ಆವರಣದಲ್ಲಿ ಇಂತಹ ಘಟನೆ ನಡೆಯಲು ಪ್ರಾಂಶುಪಾಲರ ಬೇಜವಾಬ್ದಾರಿ ಮುಖ್ಯ ಕಾರಣವಾಗಿದೆ. ಶಾಲಾ ಕಾಲೇಜುಗಳ ಕಡೆ ಬರುವ ಬೀಟ್ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ ಸರ್ಕಾರಿ ಕಾಲೇಜು ವ್ಯವಸ್ಥೆಯನ್ನು ಸರಿಪಡಿಸಲಾಗದ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *