ವ್ಯಂಗ್ಯ ವಿಡಿಯೋ ಹಂಚಿಕೊಂಡ ಬಿಜೆಪಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆ ʻಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಯಾರಗುತ್ತೀರ ಎಂದು ಬಿಜೆಪಿ ಕೇಳಿಸದನ್ನು ಇದೀಗ ಮದುವೆಗೆ ಗಂಡು ಯಾರು ಎಂಬ ಒಂದು ವ್ಯಂಗ್ಯಮಯವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಹೆಣ್ಣು ನೋಡುವ ಶಾಸ್ತ್ರವನ್ನು ಆಯೋಜಿಸಿ ಕಾಂಗ್ರಸ್‌ ಮುಖಂಡರ ಪಾತ್ರದಲ್ಲಿ ಗಂಡಿನ ಕಡೆಯವರಂತೆ ಬರುತ್ತಾರೆ ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಎಂ.ಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರನ್ನೇ ಹೋಲುವ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ನಂತರ ಬಿಜೆಪಿಯನ್ನು ಸೂಚಿಸುವ ಹೆಣ್ಣಿನ ಕಡೆಯವರು ಇದರಲ್ಲಿ ಗಂಡು ಯಾರೆಂದು ಪ್ರಶ್ನಿಸಿದಾಗ ರಾಹುಲ್‌ ಗಾಂಧಿ ಬೇರೆಯವರು ಯಾರು ಆಗಲು ಸಾಧ್ಯ ನಾನೆ ಎಂದು ಹೇಳುತ್ತಾರೆ ಆದರೆ ಅಲ್ಲೆ ಕುಳಿತಿದ್ದ ಮತ್ತೋರ್ವ ಇಲ್ಲ ನನಗೆ ಹಕ್ಕಿದೆ ನಾನು ಗಂಡು ಎಂದು ಹೇಳುತ್ತಾರೆ ಹೀಗೆ ಅಲ್ಲಿದ್ದ ಎಲ್ಲರೂ ತಾನು ತಾನು ಎಂದು ಅವರವರಲ್ಲೇ ಕಿತ್ತಾಡಲೂ ಶುರುಮಾಡುತ್ತಾರೆ.

ಈ ಮೂಲಕ ಇನ್ನೂ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಈ ವಿಡಿಯೋದಲ್ಲಿ ಪ್ರಶ್ನಿಸಿದೆ. ವಿರೋಧ ಪಕ್ಷಗಳಲ್ಲಿ ಇನ್ನೂ ಪ್ರಧಾನಿ ಅಭ್ಯರ್ಥಿಯೇ ಆಯ್ಕೆಯಾಗಿಲ್ಲ. ಅಂತಿಮವೂ ಆಗಿಲ್ಲ ಎನ್ನುವುದನ್ನ ವಿಡಿಯೋದಲ್ಲಿ ಬಿಜೆಪಿ ಪಕ್ಷ ಬಿಂಬಿಸಿದೆ. ಇದೀಗ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Font Awesome Icons

Leave a Reply

Your email address will not be published. Required fields are marked *