ನಿನ್ನೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ ಎಂದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ನಿನ್ನೆ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಅದರಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರದ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಎಲ್ಲಾ ಅಭ್ಯರ್ಥಿ ಮತ್ತು ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಮ್ಮ 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆ ಪ್ರಸ್ತಾಪ ಮಾಡಿದ್ದೇವೆ.

ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾಗಿ ಸುಳ್ಳಿನ ಮಾರುಕಟ್ಟೆ ಮಾಡುತ್ತಿದ್ದಾರೆ. ಹಿಂದುಳಿದವರ ಮೀಸಲಾತಿ ಆರ್ಟಿಕಲ್ 15 ಮತ್ತು 16ರ ಪ್ರಕಾರ ಈ ಸಮಾಜದಲ್ಲಿ ಅವರಿಗೆ ಮೀಸಲಾತಿ ಕೊಡಬೇಕಾಗಿದೆ ಎಂದರು. ಇ

ರಾಜೀವ್ ಗಾಂಧಿ ಪ್ರಧಾನ ಮಂತ್ರಿ ಆದಾಗ ಆರ್ಟಿಕಲ್ 73&74 ಕಾನೂನು ಜಾರಿಗೆ ತಂದು ಮಹಿಳೆಯರಿಗೆ ಮೀಸಲಾತಿ ತಂದರು. ಆದರೆ ಅದು ಅವರ ಕಾಲದಲ್ಲಿ ಜಾರಿ ಆಗಲಿಲ್ಲ, ನರಸಿಂಗ್ ರಾವ್ ಕಾಲದಲ್ಲಿ ಜಾರಿ ಆಯಿತು. ಕರ್ನಾಟಕದಲ್ಲಿ ಬಿಸಿಎಂ ಎ ಮತ್ತು ಬಿ ಅಂತ ರಿಸರ್ವೇಶನ್ ಮಾಡಿದ್ದೇವೆ.

ಈ ಮೂಲಕ ಮಹಿಳೆಯರಿಗೆ 33% ಮೀಸಲಾತಿ ಮಾಡಿದೆವು. ಹಿಂದುಳಿದವರಿಗೆ 33% ಮೀಸಲಾತಿ ಮಾಡಿದ್ದು, 6.6% ಬಿಸಿಎಂ ಬಿಯವರಿಗೆ ಮೀಸಲಾತಿ ಕೊಡಲಾಯಿತು. ಇದೆಲ್ಲ 1994-95ರಲ್ಲಿ ನಾನು ಹಣಕಾಸು ಮಂತ್ರಿ ಇದ್ದಾಗ ಮಾಡಿದ್ದೆವು. ಹಿಂದುಳಿದವರ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ. ಆದರೆ ಬಿಜೆಪಿ ರಾಮಾಜೋಯಿಸ್ ಈ ಮೀಸಲಾತಿ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದರು. ಖುದ್ದು ಅವರೇ ವಾದ ಮಂಡಿಸಿದ್ದರು.

ಆದರೆ ಸುಪ್ರೀಂಕೋರ್ಟ್ ಮೀಸಲಾತಿ ಎತ್ತಿ ಹಿಡಿಯಿತು. ಶಿಕ್ಷಣದಲ್ಲಿ ಹಾಗು ಉದ್ಯೋಗದಲ್ಲಿ ಚಿನ್ನಪ್ಪ ರೆಡ್ಡಿ ಅವರ ಮೀಸಲಾತಿ ಶಿಫಾರಸು ಮಾಡಿದರು. ಅದನ್ನು ವೀರಪ್ಪ ಮೋಯ್ಲಿ ಕಾಲದಲ್ಲಿ ಶಿಫಾರಸು ಮಾಡಿದ್ರೆ ದೇವೇಗೌಡರ ಕಾಲದಲ್ಲಿ ಜಾರಿ ಆಯಿತು ಎಂದು ಹೇಳಿದರು.

ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅದನ್ನು ಬಿಟ್ಟು ಏನು ಮಾಡಿದ್ದಾರೆ? ಜನರ ಭಾವನೆಗಳ ಜೊತೆ ಸರಿ ಇಲ್ಲ. ಪ್ರಧಾನಿ ಆಗಿ ಇಂತಹ ಹೇಳಿಕೆ ಪ್ರಧಾನಿ ಸ್ಥಾನಕ್ಕೆ ಗೌರವ ತರಲ್ಲ. ಇದರಿಂದ ನಮಗೆ ಏನು ಧಕ್ಕೆ ಆಗಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಕೇಂದ್ರ ಏನು ಮಾಡಿದೆ ಅದರ ಬಗ್ಗೆ ಜನರ ತೀರ್ಪು ಅಂತಿಮ. ಜನ ನಮ್ಮ 5 ಗ್ಯಾರಂಟಿ ಇಂಪ್ಯಾಕ್ಟ್ ಆಗಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದರು.

 

Font Awesome Icons

Leave a Reply

Your email address will not be published. Required fields are marked *