ದುಡ್ಡು ಉಳಿಸಲು ಬಾಲ್ಯ ವಿವಾಹ; ಮಾಂಗಲ್ಯ ಧಾರಣೆ ವೇಳೆಗೆ ಅಧಿಕಾರಿಗಳ ಎಂಟ್ರಿ

ಗದಗ: ಬಾಲ್ಯ ವಿವಾಹ ಅಪರಾಧ ಎಂದು ನಿರಂತರ ಜಾಗೃತಿ ಮಾಡಲಾಗುತ್ತಿದೆ. ಆದ್ರೆ, ಇನ್ನು ಬಾಲ್ಯ ವಿವಾಹ ಎನ್ನುವ ಅನಿಷ್ಠ ಪದ್ಧತಿ ಮಾತ್ರ ನಿಲ್ಲುತ್ತಿಲ್ಲ. ಇಂದು(ಏ.26) ಗದಗದಲ್ಲಿ ನಡೀತಿದ್ದ ಬಾಲ್ಯ ವಿವಾಹವೊಂದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಹಣವು ಉಳಿಯುತ್ತೇ ಎನ್ನುವ ಲೆಕ್ಕಾಚಾರ ಹಾಕಿಕೊಂಡು, ಪೋಷಕರು ಸೇರಿಕೊಂಡು ಮದುವೆ‌ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು.

ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವ ಸಮಯದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಎಂಟ್ರಿ ನೀಡಿದ್ದರು. ಈ ವೇಳೆ ಬಾಲಕಿಯ ವಯಸ್ಸು, ವಿವರ, ನೀಡಿದಾಗ ಬಾಲಕಿಗೆ 18 ವರ್ಷ ತುಂಬಲು ಇನ್ನೂ 15 ದಿನಗಳು ಬಾಕಿ ಇದ್ದವು. ಹೀಗಾಗಿ ಮದುವೆಗೆ ಬ್ರೇಕ್ ಹಾಕಿದ್ದಾರೆ. ಪೋಷಕರ ಮನವೊಲಿಸಿ, ಪೋಷಕರಿಂದ ಮುಚ್ವಳಿಕೆ ಪತ್ರವನ್ನು ಬರಿಸಿಕೊಂಡು ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

Font Awesome Icons

Leave a Reply

Your email address will not be published. Required fields are marked *