ಹಿರಿಯ ರಾಜಕಾರಣಿ ಸಾವು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಆಂಧ್ರಪ್ರದೇಶ:  ತೆಲುಗು ಹಾಸ್ಯ ನಟ ರಘು ಬಾಬು ಅವರ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ರಾಜಕಾರಣಿ ಒಬ್ಬರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ನರ್ಕೆಟ್​ಪಲ್ಲಿ-ಅಡ್ಡಂಕಿ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.ಸಂದಿನೇನಿ ಜನಾರ್ದನ್ ರಾವ್ (50) ಮೃತಪಟ್ಟ ವ್ಯಕ್ತಿ.

. ಇವರು ಕೆಸಿಆರ್​ ಅವರ ಬಿಆರ್​​ಎಸ್​ (ಭಾರತ್ ರಾಷ್ಟ್ರ ಸಮಿತಿ) ಪಕ್ಷದ ನಾರ್ಕೆಟ್‌ಪಲ್ಲಿ ಪಟ್ಟಣದ ಕಾರ್ಯದರ್ಶಿಯಾಗಿದ್ದರು. ನಟ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ನಾರ್ಕೆಟ್‌ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಅಪಘಾತ ಸಂಭವಿಸಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ 50 ಮೀಟರ್ ದೂರ ಹೋಗಿ ಬಿದ್ದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ವೈದ್ಯರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಜನಾರ್ದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಸಂಬಂಧ ಮೃತ ಜನಾರ್ದನ್ ಪತ್ನಿ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *