THO ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿಗೆ ಕೋರ್ಟ್‌ ಕ್ಲೀನ್‌ ಚಿಟ್‌. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಮೇ.08, 2024: (www.justkannada.in news) ನಂಜನಗೂಡು ತಾಲೂಕು ಆರೋ ಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ  ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ನ್ಯಾಯಾಲಯ ಕ್ಲೀನ್‌ ಚಿಟ್‌ ನೀಡಿದೆ.

೨೦೧೯-೨೦೨೦ ರ ಸಮಯದಲ್ಲಿ ನಂಜನಗೂಡು ಟಿಎಚ್‌ ಒ ನಾಗೇಂದ್ರ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ, ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ಮೇಲೆ ಆರೋಪ ಕೇಳಿ ಬಂದಿತ್ತು. ಇವರ ಕಿರುಕುಳದಿಂದಲೇ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌  ಮಿಶ್ರಾ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣವನ್ನು ಮೈಸೂರಿನ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿತ್ತು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ಬಳಿಕ “ ಬಿ -ವರದಿ”  ಸಲ್ಲಿಸಿದ್ದರು.

ಪೊಲೀಸರ  “ ಬಿ ವರದಿ”  ಪ್ರಶ್ನಿಸಿ, ಡಾ. ನಾಗೇಂದ್ರ ಅವರ ಮಡದಿ ನ್ಯಾಯಾಲಯದಲ್ಲಿ ಪ್ರೊಟೆಸ್ಟ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ಸಂಪೂರ್ಣ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ನಗರ ಸಿವಿಲ್‌ ಕೋರ್ಟ್‌, ಪೊಲೀಸರು ಸಲ್ಲಿಸಿರುವ ʼ ಬಿ ವರದಿ ʼ  ಎತ್ತಿ ಹಿಡಿಯಿತು. ಜತೆಗೆ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ವಿರುದ್ಧದ  ಆರೋಪಗಳು ನಿರಾಧಾರ ಎಂದು ತೀರ್ಪು ನೀಡಿತು.

ಏನಿದು ಘಟನೆ :

೨೦೨೦ ರ ಕೋವಿಡ್‌ ವೇಳೆ ನಂಜನಗೂಡು ತಾಲೋಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಜಿಪಂ ಸಿಇಒ ಪ್ರಶಾಂತ್‌ ಮಿಶ್ರಾ ಅವರ ಕಿರುಕುಳವೇ  ಕಾರಣ ಎಂದು ಆರೋಪಿಸಲಾಗಿತ್ತು.

ಇದರ ವಿರುದ್ಧ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗ ಎಫ್‍ಐಆರ್ ಸಹ ದಾಖಲಾಗಿತ್ತು. ಡಾ.ನಾಗೇಂದ್ರ ಅವರ ತಂದೆ ರಾಮಕೃಷ್ಣ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 306ರನ್ವಯ ಎಫ್‍ಐಆರ್ ದಾಖಲಿಸಿದ್ದರು.

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರಿಗೆ ಕಿರುಕುಳ ನೀಡಿ, ಅವರ ಸಾವಿಗೆ ಕಾರಣರಾದರು ಎಂಬ ಆರೋಪಕ್ಕೆ ಗುರಿ ಯಾಗಿದ್ದ ಮೈಸೂರು ಜಿಪಂ ಸಿಇಒ ಪಿ.ಕೆ.ಮಿಶ್ರಾ ಅವರನ್ನು ರಾಜ್ಯ ಸರ್ಕಾರ ವರ್ಗಾ ಯಿಸಿ, ಜಿಪಂ ಸಿಇಒ ಜವಾಬ್ದಾರಿಯನ್ನುಅಂದಿನ  ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಹೆಚ್ಚುವರಿಯಾಗಿ ವಹಿಸಿತ್ತು.

ವರ್ಗಾವಣೆ ತಡೆಗೆ ಪಿಡಿಓ ಸಂಘ ಆಗ್ರಹ :

 

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದಲ್ಲಿ ಜಿಪಂ ಸಿಇಒ ಪ್ರಶಾಂತ್‍ಕುಮಾರ್ ಮಿಶ್ರಾ ಅವರ ಹೆಸರನ್ನು ಎಳೆದು ತಂದು ಅನಗತ್ಯವಾಗಿ ವರ್ಗಾ ಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿತ್ತು.

ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿರುವುದು ಸರಿಯಲ್ಲ. ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿರುವ, ಅವರ ಮಾನವೀಯ ಗುಣಗಳನ್ನು ಹತ್ತಿರದಿಂದ ನೋಡಿರುವ ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ನಿಂದನೆ ತುಂಬಾ ನೋವುಂಟು ಮಾಡಿದೆ ಎಂದು ಸಂಘ ಬೇಸರ ವ್ಯಕ್ತಪಡಿಸಿ,  ಏಕಾಏಕಿಯಾಗಿ ಒಬ್ಬ ನಿಷ್ಟಾವಂತ, ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶ ಪಾಲಿಸಿ, ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಹಗಲು ರಾತ್ರಿ ಶ್ರಮಿಸುತ್ತಿರುವ ಸಿಇಒ ಅಂತಹ ಅಧಿಕಾರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದಿದ್ದರು.

key words: THO, MYSORE, ZP, CEO, Prashanth Kumar Mishra, clean, chit

 

summary: 

The court has given a clean chit to IAS officer Prashanth Kumar Mishra, who was the Chief Executive Officer of Mysuru Zilla Panchayat, in connection with the suicide of Nanjangud Taluk Health Officer Dr. S.R. Nagendra.

Following this, a case of abetment to suicide was registered against ZP CEO Prashanth Kumar Mishra at Alanahalli Police Station in Mysuru. The police investigated the case and later submitted a “B-report”.

 

 

Font Awesome Icons

Leave a Reply

Your email address will not be published. Required fields are marked *