ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ ಬೆಟ್ಟದಿಂದ ಬಿದ್ದು ಸಾವು

ಶ್ರೀನಗರ: ಕೋತಿ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮಹಿಳೆಯೊಬ್ಬರು ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಬಾರಾಮುಲ್ಲಾ ಜಿಲ್ಲೆಯ ಉರಿಯ ಬಸ್‌ಗ್ರಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸೈಯದ್ ಇಶಾ ಶಾ ಗಿಲಾನಿ ಅವರ ಪತ್ನಿ ಗುಡ್ಡಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೋತಿಗಳು ದಾಳಿ ಮಾಡಲು ಮುಂದಾಗಿವೆ. ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಓಡಿದ್ದಾರೆ. ಓಡುತ್ತಾ ಬೆಟ್ಟದಿಂದ ಬಿದ್ದಿದ್ದಾರೆ.

ಇಳಿಜಾರು ಪ್ರದೇಶವಾದ್ದರಿಂದ ಮಹಿಳೆ ಗಾಬರಿಯಿಂದ ಓದಿ ಆಯತಪ್ಪಿ ಬಿದ್ದಿದ್ದಾರೆ.

Font Awesome Icons

Leave a Reply

Your email address will not be published. Required fields are marked *