ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬೇಡಿಕೆ ಈಡೇರಿಕೆಗೆ ಮನವಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ    ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ವರ್ಷದ ಕಬ್ಬು ಬಾಕಿ ಮೈಸೂರು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 25 ಕೋಟಿಯಷ್ಟು 150 ರೂ ಪಾಯಿ ಪ್ರತಿ ಟನ್ ಗೆ ಕೊಡಲು ಸರ್ಕಾರ ಆದೇಶವಿದ್ದರೂ ನ್ಯಾಯಾಲಯದ ಕಡೆ ತೋರಿ ರೈತರಿಗೆ ಹಣ ನೀಡದೆ ಕಾರ್ಖಾನೆಗಳು ಮೋಸ ಮಾಡುತ್ತಿರುವ ಬಗ್ಗೆ, . ಕಬ್ಬಿನ ಕಳೆದ ಪಾಲಿನ ರಾಜ್ಯ ಸಲಹೆ ಬೆಲೆ ಕಾಯ್ದೆಯ ಪ್ರಕಾರ ಲಾಭಾಂಶದಲ್ಲಿ ಹೆಚ್ಚುವರಿ ಬಾಕಿಯನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು.

ರೈತರ ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಸಂಪರ್ಕ ಪಡೆಯಲು ಇದ್ದಂತಹ ಅಕ್ರಮ ಸಕ್ರಮ ಯೋಜನೆಯನ್ನು ಸರ್ಕಾರ  ಮತ್ತೆ ಜಾರಿಗೆ ತರಬೇಕು,ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ದನಕರುಗಳಿಗೆ ಗೋಶಾಲೆ, ಮೇವು ಬ್ಯಾಂಕುಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಬೇಕು.

ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುವ ರೈತರಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ  ವೈಜ್ಞಾನಿಕವಾಗಿ ಬೆಳೆ ನಷ್ಟ ಭರಿಸಬೇಕು ಬರಗಾಲದಲ್ಲಿ ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುತ್ತಿರುವುದು ಹಾಗೂ ಹೊಸ ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿರುವೆ ಇದರಲ್ಲಿ ವಿಶೇಷವಾಗಿ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ತೀವ್ರ ಕಿರುಕುಳ ನೀಡುತ್ತಿರುವುದು ಮತ್ತು ಒಟಿಎಸ್ ಮುಖಾಂತರ ರೈತರ ಸಾಲ ತಿರುವಳಿ ಮಾಡಲು ಒಪ್ಪದಿರುವುದು,ಕಳೆದ ಸಾಲಿನಲ್ಲಿ ರೈತರ ಬೆಳೆ ವಿಮೆ ಬಾಕಿ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ನೀಡಬೇಕು.

ರಾಜ್ಯದಲ್ಲಿ ಗ್ರಾಮೀಣ ಭಾಗದ ರೈತರ ಜೀವನಾಡಿಯಾದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ರೂ.10 ಹೆಚ್ಚುವರಿ  ಪ್ರೋತ್ಸಾಹ ಧನ ನೀಡಲು ಕ್ರಮ ಕಬಿನಿ ಕಾವೇರಿ ವ್ಯಾಪ್ತಿಯ ನಾಲೆಗಳ ಮುಖಾಂತರ ಅಂತರ್ಜಲ ವೃದ್ಧಿ ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮತ್ತು ಕೆರೆಕಟ್ಟೆಗೆ ತುಂಬಿಸಲು  ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ  ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದ್ದಾರೆ.

ಮನವಿ ಸಲ್ಲಿಕೆ  ವೇಳೆ  ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ ಜಿಲ್ಲಾಧ್ಯಕ್ಷ ಹಾಡ್ಯರವಿ ಮೈಸೂರು ನಗರಾಧ್ಯಕ್ಷ ದೇವೇಂದ್ರ ಕುಮಾರ್ ಜಿಲ್ಲಾ ಗೌರವಾಧ್ಯಕ್ಷರು ಶಿವರುದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಮುದ್ದಹಳ್ಳಿ ಚಿಕ್ಕಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸವನ್ನಹಳ್ಳಿ ಮಂಜೇಶ್, ತಾಲೂಕು ಉಪಾಧ್ಯಕ್ಷ ಶಿವಣ್ಣ, ಕಲ್ಕುಂದ ರಾಹುಲ್, ಕೆ ಆರ್ ನಗರ ದಿನೇಶ್ ಹಾಜರಿದ್ದರು.

Font Awesome Icons

Leave a Reply

Your email address will not be published. Required fields are marked *