ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ

ಧರ್ಮಶಾಲಾ: ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ . ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತನನ್ನು 22 ವರ್ಷದ ಸುನಿಲ್ ತಿವಾರಿ ಅಲಿಯಾಸ್ ಛೋಟು ಎಂದು ಗುರುತಿಸಲಾಗಿದೆ.

ಸಾವಿನ ಮೊದಲು ವಿಡಿಯೋ ರೆಕಾರ್ಡ್‌ ಮಾಡಿದ ಆತ ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

“ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ನನಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಅದಕ್ಕಾಗಿಯೇ ಇಂದು ನಾನು ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಈ ವಿಷವನ್ನು ಸೇವಿಸಿದ್ದೇನೆ ಮತ್ತು ನಾನು ಎಷ್ಟು ಹೊತ್ತು ಬದುಕುತ್ತೇನೆ ಎಂಬುದು ನನಗೆ ತಿಳಿದಿಲ್ಲ. ನಾನು 5 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ನಾನು ಇಂದು ಹೊರಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಾನು ನಿಮ್ಮನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲʼʼ ಎಂದು ಸುನಿಲ್‌ ಹೇಳಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುನಿಲ್‌ ತನ್ನ ವಿಡಿಯೊದಲ್ಲಿ ಉಲ್ಲೇಖಿಸಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬರೈಲ್ ಗ್ರಾಮದ ಮುಖ್ಯಸ್ಥ ದಿನೇಶ್, ರಾಜ್ ಕುಮಾರ್, ಪ್ರಶಾಂತ್, ಧನ್ನಿ ಮತ್ತು ಆಯುಷ್ ವಿರುದ್ಧ ಐಪಿಸಿ ಸೆಕ್ಷನ್ 30 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *