ಉಗ್ರ ಕಸಬ್​ಗೆ ಗಲ್ಲು ಶಿಕ್ಷೆ ಆಗುವಂತೆ ಮಾಡಿದ್ದ ವಕೀಲ ಉಜ್ವಲ್​ಗೆ ಬಿಜೆಪಿ ಟಿಕೆಟ್

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ 26/11 ಮುಂಬೈ ದಾಳಿಯ ಉಗ್ರ ಕಸಬ್​​ಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ವಾದ ಮಂಡಿಸಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರಿಗೆ ಬಿಜೆಪಿ ಟಿಕೆಟ್​ ನೀಡಿದೆ.

ಮುಂಬೈ ಉತ್ತರ ಮಧ್ಯ ಲೋಕಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಉಜ್ವಲ್ ನಿಕಮ್ ಅವರನ್ನು ಘೋಷಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಂಬೈ ಘಟಕದ ಮುಖ್ಯಸ್ಥೆ ಹಾಗೂ ಧಾರವಿ ಶಾಸಕಿ ವರ್ಷಾ ಗಾಯಕ್‌ವಾಡ್ ವಿರುದ್ಧ ಸ್ಪರ್ಧಿಸಲಿದ್ದಾರೆ.

Font Awesome Icons

Leave a Reply

Your email address will not be published. Required fields are marked *