ಇವತ್ತಿನ ದರ ಪಟ್ಟಿ ಹೀಗಿದೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಇಂದು ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಮತ್ತೆ ಮುಂದುವರಿಯಬಹುದು.  ಭಾರತದಲ್ಲಿ ಬೆಳ್ಳಿ ಬೆಲೆ ತುಸು ತಗ್ಗಿದೆ. ಗ್ರಾಮ್​ಗೆ 10 ಪೈಸೆ ಬೆಲೆ ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,950 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,130 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 67,950 ರೂ, ಚೆನ್ನೈ: 68,700 ರೂ
ಮುಂಬೈ: 67,950 ರೂ, ದೆಹಲಿ: 68,100 ರೂ, ಕೋಲ್ಕತಾ: 67,950 ರೂ, ಕೇರಳ: 67,950 ರೂ, ಅಹ್ಮದಾಬಾದ್: 68,000 ರೂ, ಜೈಪುರ್: 68,100 ರೂ, ಲಕ್ನೋ: 68,100 ರೂ, ಭುವನೇಶ್ವರ್: 67,950 ರೂ ಆಗಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,620 ರಿಂಗಿಟ್ (63,214 ರೂಪಾಯಿ), ದುಬೈ: 2,670 ಡಿರಾಮ್ (60,836 ರೂಪಾಯಿ), ಅಮೆರಿಕ: 730 ಡಾಲರ್ (61,086 ರೂಪಾಯಿ), ಸಿಂಗಾಪುರ: 1,012 ಸಿಂಗಾಪುರ್ ಡಾಲರ್ (62,105 ರೂಪಾಯಿ), ಕತಾರ್: 2,715 ಕತಾರಿ ರಿಯಾಲ್ (62,300 ರೂಪಾಯಿ), ಸೌದಿ ಅರೇಬಿಯಾ: 2,720 ಸೌದಿ ರಿಯಾಲ್ (60,676 ರೂಪಾಯಿ), ಓಮನ್: 288 ಒಮಾನಿ ರಿಯಾಲ್ (62,598 ರೂಪಾಯಿ), ಕುವೇತ್: 227 ಕುವೇತಿ ದಿನಾರ್ (61,635 ರೂಪಾಯಿ) ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

Font Awesome Icons

Leave a Reply

Your email address will not be published. Required fields are marked *